ವಾಷಿಂಗ್ಟನ್: ಸಂದರ್ಭಕ್ಕೆ ತಕ್ಕಂತೆ ವ್ಯವಹರಿಸುವವರು ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಾರೆ.
ಲಾಸ್ ವೆಗಾಸ್ ನಲ್ಲಿ ಆದದ್ದೂ ಇದೇ. ಮಗುವಿನ ಮೂಗಿನಲ್ಲಿ ಗೊಂಬೆಯ ಶೂ ಸಿಕ್ಕಿಹಾಕಿಕೊಂಡಿತು. ಅದನ್ನು ತೆಗೆದ ವೈದ್ಯರೊಬ್ಬರು 3000 ಡಾಲರ್ (2.13 ಲಕ್ಷ ರೂ.) ಬಿಲ್ ಮಾಡಿದ್ದಾರೆ.
ಗೊಂಬೆಯ ಜತೆ ಆಟವಾಡುತ್ತಿದ್ದ ಮಗು ತನ್ನ ಮೂಗಿನೊಳಗೆ ಗೊಂಬೆಯ 2 ಶೂವನ್ನು ಹಾಕಿಕೊಂಡಿದೆ. ಒಂದು ಶೂವನ್ನು ಹೇಗೋ ತಾಯಿ ತೆಗೆದಿದ್ದು, ಇನ್ನೊಂದನ್ನು ತೆಗೆಯಲು ಹೆಂಡರ್ಸನ್ ನಲ್ಲಿರುವ ಡಿಗ್ನಿಟಿ ಹೆಲ್ತ್ ಸೆಂಟರ್ ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾಳೆ. ಆದರೆ ಬಿಲ್ ನೋಡಿ ಕಂಗಾಲಾಗಿದ್ದಾಳೆ.
ಅಲ್ಲಿ ಮಗುವಿನ ಮೂಗಿನಿಂದ ಶೂ ತೆಗೆದ ವೈದ್ಯರು 3000ಡಾಲರ್(2.13 ಲಕ್ಷ ರೂ) ಬಿಲ್ ನೀಡಿದ್ದಾರೆ. ಬಳಿಕ ತಾಯಿ ಈ ಬಗ್ಗೆ ಚರ್ಚಿಸಿದಾಗ ಬಿಲ್ ನ್ನು 1.21 ಲಕ್ಷ ರೂ ಗೆ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ.