ಇಸ್ಲಾಮಬಾದ್ (ಪಾಕಿಸ್ತಾನ): ಮರಣದಂಡನೆಗೆ ಗುರಿಯಾಗಿರುವ ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಶಿಕ್ಷೆ ಜಾರಿಯಾಗುವ ಮುನ್ನವೇ ಮೃತಪಟ್ಟರೆ ಮೂರು ದಿನಗಳವರೆಗೆ ಆತನ ಶವವನ್ನು ನೇಣು ಹಾಕಿ ಎಂದು ಮರಣ ದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ ಆದೇಶ ಪ್ರತಿಯಲ್ಲಿ ತಿಳಿಸಿದೆ.
ಪಾಕಿಸ್ತಾನ ಸರ್ಕಾರವು ತೀರ್ಪಿನಲ್ಲಿ ದೋಷವಿದೆ ಎಂದಿದ್ದರಿಂದ ನ್ಯಾಯಾಲಯ 167 ಪುಟಗಳ ತೀರ್ಪಿನ ಪ್ರತಿಯನ್ನು ಬಿಡುಗಡೆ ಮಾಡಿದೆ. ಸದ್ಯ ಮುಷರಫ್ ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.