ಇಸ್ಲಾಮಾಬಾದ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸುಫ್ ಝೈ ಮೇಲೆ ಗುಂಡಿನ ದಾಳಿ ನಡೆಸಿದ್ದ ಪಾಕಿಸ್ತಾನ ತಾಲಿಬಾನ್ ಉಗ್ರ ಎಹ್ಸಾನುಲ್ಲ ಎಹ್ಸಾನ್ ಜೈಲಿನಿಂದ ಪರಾರಿಯಾಗಿದ್ದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.
ಜ.11ರಂದೇ ತಾನು ಜೈಲಿನಿಂದ ಪರಾರಿಯಾಗಿದ್ದೇನೆ ಎಂದು ಎಹ್ಸಾನ್ ಹೇಳಿಕೊಂಡಿದ್ದಾನೆ. ಈ ಬಗ್ಗೆ ಫೆ.6ರಂದು ಸಾಮಾಜಿಕ ಜಾಲತಾಣದಲ್ಲಿ ಎಹ್ಸಾನ್ ಆಡಿಯೊ ಸಂದೇಶವನ್ನೂ ಬಿಡುಗಡೆ ಮಾಡಿದ್ದಾನೆ. ಎಹ್ಸಾನ್ 2012ರಲ್ಲಿ ಮಲಾಲ ಮೇಲೆ ಗುಂಡಿನ ದಾಳಿ ನಡೆಸಿದ್ದ.
ಮಲಾಲ ಮೇಲಿನ ದಾಳಿ ಆರೋಪಿ ಪರಾರಿ ನಿಜವೆಂದು ಒಪ್ಪಿಕೊಂಡ ಪಾಕ್
Follow Us