
ಶ್ರೀಲಂಕಾ : ಮತ್ತೆ ಶ್ರೀಲಂಕಾದಲ್ಲಿ ಮಹೀಂದಾ ರಾಜಪಕ್ಸೆ ಯುಗ ಆರಂಭವಾಗಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಹೀಂದಾ ರಾಜಪಕ್ಸೆ ಇಂದು ಶ್ರೀಲಂಕಾದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಪ್ರಧಾನಿಯಾಗಿ ಶ್ರೀಲಂಕಾದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ ಮಹೀಂದಾ ರಾಜಪಕ್ಸೆ ಅವರು ಇಂದು ಮತ್ತೆ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಶ್ರೀಲಂಕಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ರಾನಿಲ್ ವಿಕ್ರಂ ಸಿಂಘೆ ನೇತೃತ್ವದ ಪಕ್ಷ ಸೋಲನುಭವಿಸಿದೆ. ಈ ಹಿನ್ನೆಲೆಯಲ್ಲಿ ರಾನಿಲ್ ವಿಕ್ರಂ ಸಿಂಘೆ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.