ಕೊಲಂಬೊ : ಶ್ರೀಲಂಕಾ ತಂಡದ ಖ್ಯಾತ ಬೌಲರ್ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಶ್ರೀಲಂಕಾದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಮುತ್ತಯ್ಯ ಮುರಳೀಧರನ್ ಸೇರಿ ಮೂವರನ್ನು ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ನೂತನ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ.
ಉತ್ತರ ಪ್ರಾಂತ್ಯಕ್ಕೆ ಮುತ್ತಯ್ಯ ಮುರಳೀಧರನ್ ರಾಜ್ಯಪಾಲರಾಗಿ ಆಯ್ಕೆಯಾದರೆ, ಅನುರಾಧ ಯಮಾನ್ ಪಾತ್ ಅವರು ಪೂರ್ವ ಪ್ರಾಂತ್ಯಕ್ಕೆ ಆಯ್ಕೆಯಾದ್ದಾರೆ. ಹಾಗೇ ತಿಸಾ ವಿಥಾರಾನಾ ಅವರನ್ನು ಉತ್ತರ ಮಧ್ಯ ಪ್ರಾಂತ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.