ನ್ಯೂಯಾರ್ಕ್:
ಮೆಕ್ ಡೊನಾಲ್ಡ್ ಕಂಪನಿಯ ಮಹಿಳಾ ಉದ್ಯೋಗಿ ಜತೆ ಸಂಬಂಧ ಹೊಂದಿದ್ದರೆಂಬ ಕಾರಣಕ್ಕೆ ಕಂಪನಿಯ ಸಿಇಒ ಸ್ಟೀವ್ ಈಸ್ಟರ್ಬ್ರೂಕ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಎಚ್ಆರ್ ಮುಖ್ಯಸ್ಥ ಡೇವಿಡ್ ಫೇರ್ ಹೂಸ್ಟ್ ಕೂಡ ರಾಜೀನಾಮೆ ನೀಡಿದ್ದಾರೆ.
ಮೆಕ್ ಡೊನಾಲ್ಡ್ ಕಂಪೆನಿಯಲ್ಲಿ 2015ರಿಂದ ಸಿಇಒ ಆಗಿದ್ದ 52 ವರ್ಷದ ಸ್ಟೀವ್ ಈಸ್ಟರ್ ಬ್ರೂಕ್ ಕಂಪನಿಯ ನೀತಿಯನ್ನು ಉಲ್ಲಂಘಿಸಿದ್ದರಿಂದ ಸ್ಟೀವ್ ಅವರನ್ನು ವಜಾಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಎಚ್ ಆರ್ ಮುಖ್ಯಸ್ಥರಾಗಿದ್ದ ಡೇವಿಡ್ ಕೂಡ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಸ್ಪಷ್ಟಪಡಿಸಿದೆ.