ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಪ್ರತಿನಿಧಿ ಸಭೆಯಲ್ಲಿ ವಾಗ್ದಂಡನೆಗೆ ಗುರಿಯಾಗಿದ್ದಾರೆ. ಅಧಿಕಾರ ದುರುಪಯೋಗ ಮತ್ತು ಸಂಸತ್ತಿನ ಕಲಾಪಕ್ಕೆ ಅಡ್ಡಿ ಆರೋಪದಡಿ ಅವರನ್ನು ವಾಗ್ಡಂಡನೆಗೆ ಗುರಿಪಡಿಸಲಾಗಿದೆ. ಈ ನಿರ್ಣಯದ ಪರ 230 ಮತ್ತು ವಿರುದ್ಧ 197 ಮಂದಿ ಮತ ಚಲಾಯಿಸಿದರು. ಟ್ರಂಪ್ ವಾಗ್ಡಂಡನೆ ಗುರಿಯಾದ ಮೂರನೇ ಅಮೆರಿಕದ ಅಧ್ಯಕ್ಷರಾಗಿದ್ದಾರೆ. ಜನವರಿಯಲ್ಲಿ ಸೆನೆಟ್ ವಾಗ್ದಂಡನೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಿದೆ. ಜನಪ್ರತಿನಿಧಿ ಸಭೆಯ ತೀರ್ಮಾನವನ್ನು ಶ್ವೇತ ಭವನ ಟೀಕಿಸಿದೆ. ಇದು ಅತ್ಯಂತ ಹಾಸ್ಯಾಸ್ಪದ ನಿರ್ಧಾರ ಎಂದು ಅದು ಹೇಳಿದೆ