ವಾಷಿಂಗ್ಟನ್: ಭಾರತದ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ಕೊನೆಗೂ ಪತ್ತೆಯಾಗಿದೆ. ಅಮೆರಿಕದ ಬ್ಯಾಹಾಕಾಶ ಸಂಸ್ಥೆ ನಾಸಾದ ಆರ್ಬಿಟರ್ ಇದನ್ನು ಪತ್ತೆ ಹಚ್ಚಿದೆ. ಈ ಸಂಬಂಧ ನಾಸಾ ಚಿತ್ರ ಬಿಡುಗಡೆ ಮಾಡಿದೆ. ವಿಕ್ರಮ್ ಲ್ಯಾಂಡರ್ ಅಂತಿಮ ಕ್ಷಣದಲ್ಲಿ ಚಂದ್ರನ ಮೇಲೆ ಲ್ಯಾಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಭೂಮಿಯೊಂದಿಗಿನ ಸಂಪರ್ಕ ಕಳೆದುಕೊಂಡಿತ್ತು. ಸೆಪ್ಟೆಂಬರ್ 7 ರಂದು ಭಾರತ ತನ್ನ ಮಹತ್ವಾಂಕ್ಷೆಯ ಚಂದ್ರಯಾನ -2 ಮಹಾ ಗಗನ ಯಾತ್ರೆಗೆ ಚಾಲನೆ ನೀಡಿತ್ತು.
ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಬೇಕಿದ್ದ ಸ್ಥಳದ ಮೊದಲಿನ ಹಾಗೂ ನಂತರದ ಚಿತ್ರಗಳನ್ನು ಹೋಲಿಕೆ ಮಾಡಿ ನೋಡಿ ಪತನದ ಅವಶೇಷಗಳನ್ನು ಗುರುತಿಸಿದ್ದಕ್ಕೆ ಚೆನ್ನೈ ಮೂಲದ ಷಣ್ಮುಗ ಸುಬ್ರಮಣಿಯನ್ಗೆ ಪತ್ತೆಹಚ್ಚಿದ ಕೀರ್ತಿಯನ್ನು ನಾಸಾ ನೀಡಿ ಗೌರವಿಸಿದೆ.