ವಾಂಕೂವರ್: ವಿಶ್ವದ ಮೊದಲ ವಾಣಿಜ್ಯಿಕ ವಿದ್ಯುತ್ ಚಾಲಿತ ವಿಮಾನ ಶುಕ್ರವಾರ ಯಶಸ್ವಿ ಹಾರಾಟ ನಡೆಸಿದೆ. ಸಿಯಾಟಲ್ ಮೂಲದ ಮಾಗ್ನಿ ಎಕ್ಸ್ ಹಾರ್ಬರ್ ಏರ್ ಜಂಟಿಯಾಗಿ ಆರು ಸೀಟ್‌ಗಳು ಇರುವ ವಿಮಾನವನ್ನು ಅಭಿವೃದ್ಧಿಪಡಿಸಿದೆ.
ಕೆನಡಾದ ವಾಂಕೂವರ್‌ನಲ್ಲಿ ಹದಿನೈದು ನಿಮಿಷಗಳ ಕಾಲ ವಿಮಾನ ಹಾರಾಟ ನಡೆಸಿದೆ. ವೈಮಾನಿಕ ಇಂಧನದಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಮಾಗ್ನಿ ಎಕ್ಸ್, ಹಾರ್ಬರ್ ಏರ್ ಜತೆ ಗೂಡಿ ವಿಮಾನದ ಮೋಟರ್ ವಿನ್ಯಾಸ ಮಾಡಿದೆ.