ಕೊಲೊಂಬೋ: ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಖಾಸಗಿ ಹೆಲಿಕಾಪ್ಟರ್ ಗಳ ಮೇಲೆ ಕಳೆದ 25 ವರ್ಷಗಳಿಂದ ವಿಧಿಸಲಾಗಿದ್ದ ನಿರ್ಬಂಧವನ್ನು ಶ್ರೀಲಂಕಾ ತೆರವುಗೊಳಿಸಿದೆ.
ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷ ಈ ಆದೇಶ ಹೊರಡಿಸಿದ್ದಾರೆ. ಈಗ ಕೊಲೊಂಬೋದ ಗಾಲೆ ಫೇಸ್ ನ ರಕ್ಷಣಾ ಮೈದಾನದಿಂದ ಖಾಸಗಿ ಪ್ರವಾಸಿ ಹೆಲಿಕಾಪ್ಟರ್ ಗಳು ಹಾರಾಟ ನಡೆಸಬಹುದು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಹಾರಾಟ ಪುನಾರಂಭಕ್ಕೆ ಈಗಾಗಲೇ ನಾಲ್ಕು ಸ್ಥಳೀಯ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.