ಇಟಲಿ : ಲವ್ ಪ್ರಪೋಸ್ ಮಾಡಲು ಪಾರ್ಕ್ ಆದರೇನು, ಮನೆಯಾದರೇನು, ದೇವಸ್ಥಾನವಾದರೇನು? ಆದರೆ, ಇಟಲಿಯ ಸಂಸದರೊಬ್ಬರು ಸಂಸತ್ ಅಧಿವೇಶನದ ವೇಳೆಯೇ ತಮ್ಮ ಪ್ರಿಯತಮೆಗೆ ಪ್ರಪೋಸ್ ಮಾಡಿದ್ದಾರೆ.
ಇಟಲಿಯ ಲೀಗ್ ಪಕ್ಷದ ಸಂಸದ ಫ್ಲಾವಿಯೋ ಡಿ ಮುರೋ (33) ಸಂಸತ್ ನಲ್ಲಿ ಚರ್ಚೆ ನಡೆಯುತ್ತಿರುವಾಗ ಉಂಗುರ ತೆಗೆದುಕೊಂಡು ಸಾರ್ವಜನಿಕ ಗ್ಯಾಲರಿಯಲ್ಲಿ ಕುಳಿತಿದ್ದ ತಮ್ಮ ಪ್ರಿಯತಮೆ ಎಲಿಸಾ ಡಿ ಲಿಯೋ ಗೆ ನನ್ನನ್ನು ವಿವಾಹವಾಗುತ್ತೀಯಾ ಎಂದು ಪ್ರಪೋಸ್ ಮಾಡಿದ್ದಾರೆ.
ಇದಕ್ಕೆ ಸ್ಪೀಕರ್ ಅಸಮಾಧಾನಗೊಂಡು ಇಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಆದರೆ ಆಕೆ ನನಗೆ ವೈಯಕ್ತಿಕವಾಗಿ, ರಾಜಕೀಯವಾಗಿ ಅತ್ಯಂತ ನಿಕಟವಾಗಿರುವುದರಿಂದ ಪ್ರಪೋಸ್ ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ಮುರೋ ಹೇಳಿದ್ದಾರೆ.