ಬ್ರುಸೆಲ್: ಇರಾನ್-ಅಮೆರಿಕ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಎಚ್ಚರದಿಂದ ಇರುವಂತೆ ಯುರೋಪಿಯನ್ ಒಕ್ಕೂಟದ ವಾಯುಯಾನ ಸುರಕ್ಷತಾ ಸಂಸ್ಥೆ ಎಲ್ಲ ಏರ್ಲೈನ್ಸ್ಗಳಿಗೆ ಸದ್ಯ ಯಾರೂ ಇರಾನ್ ವಾಯುಮಾರ್ಗದಲ್ಲಿ ಸಂಚಾರ ಮಾಡಬೇಡಿ ಎಂದು ಸೂಚನೆ ನೀಡಿದೆ.
ತಾವೇ ಉಕ್ರೇನ್ ವಿಮಾನ ಹೊಡೆದುರುಳಿಸಿದ್ದು ಎಂದು ಇರಾನ್ ಸೇನೆ ಒಪ್ಪಿಕೊಂಡ ನಂತರ ಇಂತಹದೊಂದು ಸೂಚನೆ ಹೊರಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಮಧ್ಯೆ, ಇನ್ನೊಮ್ಮೆ ಇಂತಹ ಅನಾಹುತ ಸಂಭವಿಸದಂತೆ ಎಚ್ಚರದಿಂದ ಕೆಲಸ ಮಾಡಿ ಎಂದು ಇರಾನ್ ಸರ್ವೋಚ್ಛ ನಾಯಕ ಅಲಿ ಖಮೇನಿ ತಮ್ಮ ದೇಶದ ಸೇನಾಪಡೆಗಳಿಗೆ ಸೂಚನೆ ನೀಡಿದ್ದಾರೆ
ಸದ್ಯ ಇರಾನ್ ವಾಯುಮಾರ್ಗ ಬಳಸದಿರಿ
Follow Us