ಬ್ರಿಟನ್: ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನಾ ರಾಜಮನೆತನದ ಹಿರಿಯ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.
ಇವರಿಬ್ಬರ ಈ ನಿರ್ಧಾರ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಗೆ ಶಾಕ್ ನೀಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಉತ್ತರ ಅಮೇರಿಕಾದಲ್ಕೇ ಹೆಚ್ಚಿನ ಸಮಯ ಕಳೆಯುತ್ತಿರುವ ಈ ದಂಪತಿ ರಾಜಮನೆಹತನದಿಂದ ದೂರ ಉಳಿಯಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ರಾಣಿ ಎರಡನೇ ಎಲಿಜಬೆತ್ ಅವರು ಈ ಬಗ್ಗೆ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ರಾಜಮನೆತನದ ಮೂಲಗಳು ತಿಳಿಸಿವೆ.