ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸುಮಾರು ಒಂದು ಕೋಟಿ ಜನರು ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.
ಇಲ್ಲಿನ ಆರೋಗ್ಯ ಸಚಿವಾಲಯ ಈ ಮಾಹಿತಿ ನೀಡಿದ್ದು, ಇದು ದೇಶದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟಾಗಿದೆ.
ದೇಶಾದ್ಯಂತ ಸುಮಾರು 9,500 ಜನರಿಗೆ ಮಾಡಲಾದ ಪ್ರತಿಕಾಯ ಪರೀಕ್ಷೆಗಳ ಆಧಾರದಲ್ಲಿ ನಡೆಸಲಾದ ಸಮೀಕ್ಷೆಯಿಂದ ಈ ಅಂಕಿ ಸಂಖ್ಯೆಗಳನ್ನು ಕಲೆಹಾಕಲಾಗಿದೆ ಎಂದು ಆರೋಗ್ಯ ಸಚಿವ ಅಹ್ಮದ್ ಜವಾದ್ ಉಸ್ಮಾನಿ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಹಕಾರದೊಂದಿಗೆ ದೇಶದಲ್ಲಿ ಕೊರೋನಾ ಚಿಕಿತ್ಸೆ ನೀಡಲಾಗುತ್ತಿದ್ದು, ದೇಶದ ಒಟ್ಟು ಜನಸಂಖ್ಯೆಯ 31.5 ಶೇಕಡದಷ್ಟು ಮಂದಿಗೆ ಸೋಂಕು ತಗಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಈ ಪೈಕಿ ಗರಿಷ್ಠ ಸೋಂಕು ದರ ಕಾಬೂಲ್ನಲ್ಲಿ ದಾಖಲಾಗಿದೆ.
ಅಫ್ಘಾನಿಸ್ತಾನದಲ್ಲಿ 1 ಕೋಟಿ ಕೊರೋನಾ ಸೋಂಕಿತರು!
Follow Us