newsics.com
ಇಂಗ್ಲೆಂಡ್: ಬ್ರಿಟಿಷ್ ಬ್ರಾಡ್ ಕಾಸ್ಟರ್ ಹಾಗೂ ಇತಿಹಾಸಕಾರ ಸರ್ ಡೇವಿಡ್ ಅಟ್ಟೇನ್ ಬರ್ಗ್ ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಖಾತೆ ತೆರೆದ ನಾಲ್ಕೂಮುಕ್ಕಾಲು ಗಂಟೆಯಲ್ಲಿ 10 ಲಕ್ಷ ಫಾಲೋವರ್ ಪಡೆದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವದಲ್ಲಿ ಅತಿ ವೇಗವಾಗಿ 1 ಮಿಲಿಯನ್ ಫಾಲೋವರ್ ಪಡೆದ ವ್ಯಕ್ತಿ ಎಂದು ಖ್ಯಾತರಾಗಿದ್ದಾರೆ. ಗುರುವಾರ ಅವರು ಸಾಮಾಜಿಕ ಜಾಲತಾಣ ಖಾತೆ ತೆರೆದು ಒಂದು ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. ‘ಈಗಿನ ಆಧುನಿಕ ಪದ್ಧತಿಗೆ ಅನುಗುಣವಾಗಿ ಸಾಮಾಜಿಕ ಜಾಲತಾಣ ಬಳಕೆ ಅನಿವಾರ್ಯ. ಜಗತ್ತು ಸಂಕಷ್ಟದಲ್ಲಿದೆ. ಖಂಡಗಳಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹಿಮ ನದಿಗಳು ಕರಗುತ್ತಿವೆ. ಸಮುದ್ರದಿಂದ ಮೀನು ಕಾಣೆಯಾಗುತ್ತಿದೆ. ಕೋರಲ್ ರೀಪ್ ಗಳು ಒಣಗುತ್ತಿವೆ’ ಎಂದು ಅವರು ತಮ್ಮ ಮೊದಲ ವಿಡಿಯೋದಲ್ಲಿ ಹೇಳಿದ್ದಾರೆ. 4 ತಾಸು 44 ನಿಮಿಷದಲ್ಲಿ ಅವರನ್ನು 10 ಲಕ್ಷ ಜನ ಫಾಲೋ ಮಾಡಿದ್ದಾರೆ. 94 ವರ್ಷದ ಸರ್ ಡೇವಿಡ್ ಅವರು 60 ವರ್ಷದಿಂದ ರೇಡಿಯೋ ಜಾಗೂ ಇತರ ಬ್ರಾಡ್ ಕಾಸ್ಟಿಂಗ್ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದಾರೆ.
ಆರ್ಥಿಕ ತಜ್ಞೆ ಐಷರ್ ಅಹ್ಲುವಾಲಿಯಾ ಇನ್ನಿಲ್ಲ