ಕರಾಚಿ: ಇಲ್ಲಿ ನಿಗೂಢ ವಿಷಾನಿಲ ಹರಡಿದ ಪರಿಣಾಮ 11 ಜನ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರಾಚಿಯ ಕೇಮಾರಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಅನೇಕರು ಗಂಭೀರ ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. ಎಲ್ಲರನ್ನೂ ಕೂಡಲೇ ಸಮೀಪದ ಜಿಯಾವುದ್ದೀನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಾನಿಲ ಹರಡುವುದಕ್ಕೆ ಕಾರಣವಾಗಿದ್ದೇನು ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ತನಿಖೆ ಮುಂದುವರಿದಿದೆ ಎಂದು ಕರಾಚಿ ಪೊಲೀಸ್ ಮುಖ್ಯಸ್ಥ ಗುಲಾಂ ನಬಿ ಮೆಮೋನ್ ಪ್ರತಿಕ್ರಿಯಿಸಿದ್ದಾರೆ.
ಸೋಯಾಬೀನ್ ಚೀಲಗಳನ್ನು ಹಡಗೊಂದರಿಂದ ಅನ್ಲೋಡ್ ಮಾಡುವಾಗ ಅಥವಾ ಅಂಥ ಯಾವುದಾದರೂ ವಸ್ತುವನ್ನು ಅನ್ಲೋಡ್ ಮಾಡುವಾಗ ವಿಷಾನಿಲ ಹರಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ನಿಗೂಢ ವಿಷಾನಿಲಕ್ಕೆ 11 ಜನ ಬಲಿ
Follow Us