newsics.com
ವಾಷಿಂಗ್ಟನ್: ಪೋಷಕಾಂಶಗಳಿಂದ ವಂಚಿತವಾದ ಪುಟ್ಟ ಮಕ್ಕಳಿಗೆ ನೆರವಾಗಲು ಅಮೆರಿಕದ ಮಹಿಳೆಯೊಬ್ಬರು ತನ್ನ 118 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ್ದಾರೆ.
ಯುನೈಟೆಡ್ ಸ್ಟೇಟ್ನಲ್ಲಿ ಬೇಬಿ ಫಾರ್ಮುಲಾ ಕೊರತೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯುಎಸ್ ಉತಾಹ್ ಮಹಿಳೆ ಅಲಿಸ್ಸಾ ಚೆಟ್ಟಿ ತನ್ನ 118 ಲೀಟರ್ಗಿಂತಲೂ ಹೆಚ್ಚು ಎದೆ ಹಾಲನ್ನು ಮಾರಾಟ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಲಿಸ್ಸಾ ಚಿಟ್ಟಿ, ಎದೆಹಾಲು ತುಂಬಿರುವ ಮೂರಕ್ಕಿಂತ ಹೆಚ್ಚು ಫ್ರೀಜ್ಗಳನ್ನು ಹೊಂದಿದ್ದು, ನಾನು ಮನೆಯಿಂದ ಯಾವಾಗಲೂ ಹೊರಗೆ ಇರಲು ಬಯಸುತ್ತೇನೆ. ಇದರಿಂದ ಬೇರೆಯವರಿಗೆ ಸಹಾಯ ಮಾಡಬಹುದು ಎಂದು ತಿಳಿದುಕೊಂಡಿದ್ದೇನೆ. ನನ್ನ ಬಳಿ 3,000 ಔನ್ಸ್ಗಳಿವೆ ಎಂದು ನನಗೆ ತಿಳಿದಿದೆ ಎಂದಿದ್ದಾರೆ.
ಅಂದಹಾಗೆ, ತಮ್ಮ ಎದೆಹಾಲಿನ ಬೆಲೆಯನ್ನು ಒಂದು ಔನ್ಸ್ ಗೆ 1 ಡಾಲರ್(77.48) ನಿಗದಿಪಡಿಸಿದ್ದಾರೆ.
ದಾಖಲೆಯ ಏರಿಕೆ ಕಂಡ ಬೆಳ್ಳಿ ಬೆಲೆ ; ಚಿನ್ನದ ಬೆಲೆಯಲ್ಲಿ 330 ರೂ. ಏರಿಕೆ