ನವದೆಹಲಿ: ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಫ್ರಾನ್ಸ್ ಕೈ ಜೋಡಿಸಿದೆ. ಭಾರತವೂ ಫ್ರಾನ್ಸ್ ಗೆ ಜೀವರಕ್ಷಕ ಔಷಧಗಳನ್ನು ಈಗಾಗಲೇ ಪೂರೈಸಿದೆ.
ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಫ್ರಾನ್ಸ್ ಸರ್ಕಾರ 120 ವೆಂಟಿಲೇಟರ್ ಮತ್ತು 50 ಸಾವಿರ ಕೋವಿಡ್ -19 ಪರೀಕ್ಷಾ ಕಿಟ್ಗಳನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದೆ. ಮಂಗಳವಾರ ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಅವರಿಂದ ಭಾರತೀಯ ರೆಡ್ಕ್ರಾಸ್ ಸೊಸೈಟಿ ಮತ್ತು ಐಸಿಎಂಆರ್ ಅಧಿಕಾರಿಗಳು ಸ್ವೀಕರಿಸಿದರು.
ಕೊರೋನಾ ಸೋಂಕು ನಿಯಂತ್ರಣ ಮತ್ತು ನಿರ್ಮೂಲನೆಗೆ ಭಾರತ ಮತ್ತು ಫ್ರಾನ್ಸ್ ಒಟ್ಟುಗೂಡಿ ಹೋರಾಟ ನಡೆಸಬೇಕಿದೆ. ಮಹಾಮಾರಿ ವಿರುದ್ಧದ ಹೋರಾಟಕ್ಕೆ ಭಾರತದ ಜತೆ ಕೈಜೋಡಿಸಲು ಫ್ರಾನ್ಸ್ ಸದಾ ಸಿದ್ಧವಾಗಿರುತ್ತದೆ. ಅದಕ್ಕೆ ಅಗತ್ಯವಾಗಿರುವ ಮೂಲಸೌಕರ್ಯಗಳ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಫ್ರಾನ್ಸ್ ರಾಯಭಾರಿ ಎಮ್ಯಾನ್ಯುವಲ್ ಲೆನೈನ್ ತಿಳಿಸಿದ್ದಾರೆ.
App ನಿಷೇಧ ಮರುಪರಿಶೀಲನೆಗೆ ಚೀನಾ ಒತ್ತಡ
‘ಭಾರತಕ್ಕೆ ಫ್ರಾನ್ಸ್ ಪ್ರಮುಖ ಕಾರ್ಯತಂತ್ರದ ಪಾಲುದಾರ ದೇಶಗಳಲ್ಲಿ ಒಂದಾಗಿದ್ದು, ಕೊರೋನಾ ರೋಗವನ್ನು ಎದುರಿಸಲು ಫ್ರಾನ್ಸ್ಗೆ ಈಗಾಗಲೇ ಜೀವರಕ್ಷಕ ಔಷಧಗಳನ್ನು ಪೂರೈಸಲಾಗಿದೆ.’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.