ನೆದರ್ಲೆಂಡ್‌ ನಲ್ಲಿ 13 ಒಮಿಕ್ರಾನ್ ಪ್ರಕರಣಗಳು ಪತ್ತೆ

newsics.com ಹೇಗ್‌ (ನೆದರ್ಲೆಂಡ್‌): ದಕ್ಷಿಣ ಆಫ್ರಿಕಾದಿಂದ ನೆದರ್ಲೆಂಡ್‌ಗೆ ಆಗಮಿಸಿದ 13 ಜನರಿಗೆ ಕೊರೊನಾ ವೈರಸ್‌ನ ಒಮಿಕ್ರಾನ್ ರೂಪಾಂತರಿ ಸೋಂಕು ತಗುಲಿದೆ ಎಂದು ಅಲ್ಲಿನ ಸಾರ್ವಜನಿಕ ಆರೋಗ್ಯ ಪ್ರಾಧಿಕಾರ ತಿಳಿಸಿದೆ. ದಕ್ಷಿಣ ಆಫ್ರಿಕಾಕ್ಕೆ ವಿಮಾನಯಾನ ನಿಷೇಧಿಸುವುದಕ್ಕೂ ಮೊದಲು ಅಲ್ಲಿಂದ ಆಗಮಿಸಿದ್ಸ ಪ್ರಯಾಣಿಕರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 61 ಪ್ರಯಾಣಿಕರಲ್ಲಿ ಕೊರೋನಾ ಸೋಂಕು‌ ಇರುವುದು ದೃಢಪಟ್ಟಿದ್ದು, 13 ಮಂದಿಗೆ ಒಮಿಕ್ರಾನ್‌ ಸೋಂಕು ಇರುವುದು ಖಚಿತವಾಗಿದೆ. ಈಗಾಗಲೇ ಒಮಿಕ್ರಾನ್ ರೂಪಾಂತರಿಯ ಎರಡು ಪ್ರಕರಣಗಳು ಬ್ರಿಟನ್‌ನಲ್ಲಿ ಪತ್ತೆಯಾಗಿವೆ ಎಂದು ಬ್ರಿಟನ್ ಆರೋಗ್ಯ ಸಚಿವ ತಿಳಿಸಿದ್ದಾರೆ. … Continue reading ನೆದರ್ಲೆಂಡ್‌ ನಲ್ಲಿ 13 ಒಮಿಕ್ರಾನ್ ಪ್ರಕರಣಗಳು ಪತ್ತೆ