newsics.com
ಅರ್ಜೆಂಟೀನಾ: ಅರ್ಜೆಂಟೀನಾದಲ್ಲಿ 140 ದಶಲಕ್ಷ ವರ್ಷಗಳ ಹಳೆಯ ಡೈನೋಸರ್ ಪಳಯುಳಿಕೆ ಪತ್ತೆಯಾಗಿದೆ. ಪಳೆಯುಳಿಕೆಗಳು ಕ್ರಿಟೇಶಿಯಸ್ ಅವಧಿಯಲ್ಲಿ ವಾಸವಾಗಿದ್ದ ನಿಂಜಾಟಿತನ್ ಜಪಟೈ ಟೈಟಾನೊಸಾರ್ ಎಂಬ ಡೈನೋಸಾರ್ ಪ್ರಭೇದವನ್ನು ಪ್ರತಿನಿಧಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಅವುಗಳು ನಾಲ್ಕು ಕಾಲುಗಳನ್ನು ಹೊಂದಿರುವ , ಉದ್ದನೆಯ ಕುತ್ತಿಗೆಯ, ಸಸ್ಯ-ತಿನ್ನುವ ಡೈನೋಸಾರ್ಗಳಾಗಿದ್ದವು ಎನ್ನಲಾಗಿದೆ. ಈಗ ಸಿಕ್ಕಿರುವುದು 115 ಅಡಿ ಉದ್ದದ ಪಳೆಯುಳಿಕೆಯಾಗಿದೆ ಎನ್ನಲಾಗಿದ್ದು, ಟೈಟಾನೊಸಾರ್ಗಳು ಸೌರಪಾಡ್ಸ್ ಎಂಬ ದೊಡ್ಡ ಡೈನೋಸಾರ್ ಗುಂಪಿನ ಭಾಗವಾಗಿದೆ.
ಇದು ಅರ್ಜೆಂಟೀನಾ ಮಾತ್ರವಲ್ಲದೆ ಜಗತ್ತಿನ ಅತ್ಯಂತ ಹಳೆಯ ಪಳೆಯುಳಿಕೆಯ ದಾಖಲೆಯಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ತಿಳಿಸಿದ್ದಾರೆ.