Sunday, July 3, 2022

ಪಾಕಿಸ್ತಾನದಲ್ಲಿ ಮತ್ತೆ 15 ಪೈಲಟ್ ಗಳ ಅಮಾನತು

Follow Us

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇನ್ನಷ್ಟು ನಕಲಿ ಪೈಲಟ್ ಗಳನ್ನು ಅಮಾನತು ಮಾಡಲಾಗಿದೆ. ಪರೀಕ್ಷೆ ವೇಳೆ ಪರೀಕ್ಷಾರ್ಥಿಗಳ ಬದಲಿಗೆ ಇನ್ನೊಬ್ಬರು ಪರೀಕ್ಷೆಗೆ ಹಾಜರಾಗಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ನಕಲಿ ಪೈಲಟ್ ಗಳ ವಿವಾದದಿಂದಾಗಿ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಪಾಕಿಸ್ತಾನ ತೀವ್ರ ಮುಖ ಭಂಗಕ್ಕೆ ಗುರಿಯಾಗಿದೆ. ನಕಲಿ ಪೈಲಟ್ ವಿಷಯ ಬೆಳಕಿಗೆ  ಬಂದ ಕೂಡಲೇ ಐರೋಪ್ಯ ಒಕ್ಕೂಟ ಪಾಕಿಸ್ತಾನದ ವಿಮಾನ ಹಾರಾಟದ ಮೇಲೆ ನಿರ್ಬಂಧ ವಿಧಿಸಿತ್ತು.

ಪಾಕಿಸ್ತಾನದ ಒಟ್ಟು ಪೈಲಟ್ ಗಳ ಶೇಕಡ 40 ಮಂದಿ ನಕಲಿಗಳು ಎಂಬ ಅಂಶ ಇತ್ತೀಚೆಗೆ ತನಿಖೆಯಿಂದ ಬೆಳಕಿಗೆ ಬಂದಿತ್ತು. ಪಾಕಿಸ್ತಾನದ ಪರಮಾಪ್ತ ರಾಷ್ಟ್ರ ಮಲೇಷಿಯಾ ಕೂಡ ತನ್ನ ಏರ್ ಲೈನ್ಸ್  ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪಾಕ್ ಮೂಲದ ಪೈಲಟ್ ಗಳನ್ನು  ಕರ್ತವ್ಯದಿಂದ ಮುಕ್ತಿಗೊಳಿಸಿತ್ತು.

ಕರಾಚಿಯಲ್ಲಿ ಪಾಕಿಸ್ತಾನದ ವಿಮಾನ ಪತನಗೊಂಡ ಬಳಿಕ ಪಾಕಿಸ್ತಾನದ ಪೈಲಟ್ ಗಳ ಅರ್ಹತೆ ಬಗ್ಗೆ ಮೊದಲ ಬಾರಿ ಸಂಶಯ ವ್ಯಕ್ತವಾಗಿತ್ತು. ಈ ದುರಂತದಲ್ಲಿ 70ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!