Wednesday, July 6, 2022

ಈ ಆಡಿನ ಮರಿಯ ಕಿವಿ 19 ಇಂಚು ಉದ್ದ!

Follow Us

newsics.com

ಪಾಕಿಸ್ತಾನ: ಇಲ್ಲಿನ ಸಿಂಧ್ ಪ್ರಾಂತ್ಯದಲ್ಲಿ ಜನಿಸಿರುವ ಆಡಿನ ಮರಿ ತನ್ನ ಕಿವಿಗಳಿಂದಲೇ ಸುದ್ದಿಯಾಗಿದೆ.

ಜೂನ್ 5ರಂದು ಜನಿಸಿರುವ ಈ ಆಡಿನ ಮರಿಗೆ ಸಿಂಬಾ ಎಂದು ನಾಮಕರಣ ಮಾಡಲಾಗಿದೆ. ಈ ಮರಿಯ ಕಿವಿ 19 ಇಂಚು ಉದ್ದವಿದ್ದು, ಆಕರ್ಷಣೆಯ ಕೇಂದ್ರವಾಗಿದೆ. ಸಿಂಬಾ ನೋಡಲು ಜನ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತನ್ನ ಅತಿ ಉದ್ದದ ಅಂದರೆ 19 ಇಂಚಿನ ಕಿವಿಗಳಿಂದಾಗಿಯೇ ಈ ಆಡಿ‌ನ ಮರಿ ಗಿನ್ನಿಸ್ ದಾಖಲೆ ಬರೆಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಅಂದಹಾಗೆ, ಮಹಮ್ಮದ್ ಹಸನ್ ನರೇಜೋ ಈ ಆಡಿನ ಮರಿಯ ಮಾಲೀಕರು. ಸಿಂಬಾಳ ಕಿವಿಗಳು ತುಂಬಾ ಉದ್ದವಾಗಿದ್ದು, ಅದು ನಡೆಯುವಾಗ ಕಿವಿಗಳು ನೆಲದಲ್ಲಿ ಚಾಚಿಕೊಂಡಿರುತ್ತವೆ ಎಂದು ಮಹಮ್ಮ್ಗ ಹಸನ್ ನರೇಜೋ ತಿಳಿಸಿದ್ದಾರೆ.

ನುಬಿಯನ್ ತಳಿಯ ಆಡಿನ ಮರಿ ಇದಾಗಿದ್ದು, ಉದ್ದವಾದ ಕಿವಿಗಳು ಬಹುಶಃ ಜೀನ್ ರೂಪಾಂತರ ಅಥವಾ ಆನುವಂಶಿಕ ಅಸ್ವಸ್ಥತೆಯಿಂದ ಹೀಗಾಗಿದೆ ಎಂದು ಟೆಲಿಗ್ರಾಫ್ ವರದಿ ತಿಳಿಸಿದೆ.

ಬುಲೆಟ್ ಪ್ರೂಫ್, ವೆಸ್ಟ್ ಧರಿಸಿದ್ದ ಕೋತಿ ಶವವಾಗಿ ಪತ್ತೆ

ಮತ್ತಷ್ಟು ಸುದ್ದಿಗಳು

vertical

Latest News

ಅವಧಿಗೂ ಮುನ್ನವೇ ಖೈದಿಗಳ ಬಿಡುಗಡೆ : ಕೇಂದ್ರ

newsics.com ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಖೈದಿ, ತೃತೀಯ ಲಿಂಗಿ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಖೈದಿಗಳನ್ನೂ ಸೆರೆವಾಸದಿಂದ...

ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ

newsics.com ಹುಬ್ಬಳ್ಳಿ; ವಾಸ್ತು ಶಾಸ್ತ್ರ  ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ...

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

newsics.com ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಭೂಮಿಯಿಂದ...
- Advertisement -
error: Content is protected !!