Tuesday, April 13, 2021

ನೌಕಾ ಯುದ್ಧಾಭ್ಯಾಸ ವೇಳೆ ಅಚಾತುರ್ಯ; ಕ್ಷಿಪಣಿ ಬಡಿದು 19 ಇರಾನ್ ಸೈನಿಕರ ಸಾವು

ಟೆಹರಾನ್: ಇರಾನ್ ನೌಕಾಪಡೆಯ ಯುದ್ಧಾಭ್ಯಾಸದ ವೇಳೆ ಯುದ್ಧನೌಕೆಯೊಂದಕ್ಕೆ ಕ್ಷಿಪಣಿಯೊಂದು ಬಡಿದು 19 ನೌಕಾಪಡೆ ಸೈನಿಕರು ಮೃತಪಟ್ಟಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ.
ಇರಾನ್‌ನ ದಕ್ಷಿಣ ಕರಾವಳಿಯ ಸಮುದ್ರದಲ್ಲಿರುವ ಬಂದರೆ-ಜಸ್ಕ್ ಸಮೀಪ ಓಮನ್ ಕೊಲ್ಲಿಯಲ್ಲಿ ಭಾನುವಾರ ಸಂಜೆ ಈ ದುರಂತ ಸಂಭವಿಸಿದೆ ಎಂದು ಸರ್ಕಾರಿ ಟೆಲಿವಿಷನ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಒಂದು ದೊಡ್ಡ ಹಡಗಿನಿಂದ ಉಡಾಯಿಸಿದ ಕ್ಷೀಪಣಿ ಕೋನಾರ್ಕ್ ಎನ್ನುವ ಮಿನಿ ಸಮರ ನೌಕೆಯ ಮೇಲೆ ಬಂದು ಎರಗಿದೆ. ನಿರ್ದಿಷ್ಟ ಗುರಿ ಇರಿಸಿ ದಾಳಿ ನಡೆಸುವ ಕಸರತ್ತಿನ ಅಭ್ಯಾಸ ನಡೆಸಲಾಗುತ್ತಿತ್ತು. ಗುರಿಯನ್ನು ನಿರ್ದಿಷ್ಟ ಸ್ಥಳದಲ್ಲಿ ಇರಿಸಲು ಯುದ್ಧನೌಕೆ ಕೋನಾರ್ಕ್ ತೆರಳಿತ್ತು. ಆದರೆ, ಗುರಿ ಇಟ್ಟು ಯುದ್ಧನೌಕೆ ಸುರಕ್ಷಿತ ಅಂತರಕ್ಕೆ ಮರಳುವ ಮುನ್ನವೇ ಇನ್ನೊಂದು ಯುದ್ಧನೌಕೆಯಿಂದ ಗುರಿಯತ್ತ ಕ್ಷಿಪಣಿ ಹಾರಿಸಲಾಗಿತ್ತು. ಇದರಿಂದ ಕೋನಾರ್ಕ್ ಯುದ್ಧನೌಕೆ ಧ್ವಂಸಗೊಂಡಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಕೋನಾರ್ಕ್ ಮಿನಿ ಸಮರ ನೌಕೆಯು ಡಚ್ ನಿರ್ಮಿತ ಯುದ್ಧನೌಕೆಯಾಗಿದ್ದು, 2018 ರಲ್ಲಿ ಇರಾನ್‌ ಸೇನೆಗೆ ಸೇರ್ಪಡೆಯಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!