newsics.com
ಕಾಬೂಲ್: ಆಫ್ಘಾನಿಸ್ತಾನ ಕೇಂದ್ರ ಭಾಗದ ಬಾಮಿಯಾನ್ ಪ್ರಾಂತ್ಯದಲ್ಲಿ ಎರಡು ಭೀಕರ ಬಾಂಬ್ ಸ್ಫೋಟಿಸಿ, 17 ಮಂದಿ ಮೃತಪಟ್ಟಿದ್ದಾರೆ. ಹಲವಾರು ಗಾಯಗೊಂಡಿದ್ದಾರೆ.
ಇಂದು (ನ.24) ಬಾಮಿಯಾನ್ ನಗರದ ಜನನಿಬಿಡ ಮಾರುಕಟ್ಟೆಯ ರಸ್ತೆ ಬದಿಯಲ್ಲಿ ಸ್ಫೋಟಕವನ್ನು ಇರಿಸಲಾಗಿತ್ತು. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಯಾ ಹಜಾರಾ ಸಮುದಾಯದವರು ವಾಸಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಜಬಾರ್ದಸ್ಟ್ ಸಫಾಯಿ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ 15 ನಾಗರಿಕರು ಹಾಗೂ ಇಬ್ಬರು ಸಂಚಾರಿ ಪೊಲೀಸ್ ಅಧಿಕಾರಿಗಳಿದ್ದಾರೆ. ಸುಮಾರು 45ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಬಹುತೇಕರು ರೆಸ್ಟೋರೆಂಟ್ ಹಾಗೂ ಅಂಗಡಿಗಳ ಬಳಿ ಇದ್ದರು ಎಂದು ತಿಳಿದುಬಂದಿದೆ. ಮೃತಪಟ್ಟವರಲ್ಲಿ ಮಹಿಳೆ ಹಾಗೂ ಒಂದು ಮಗು ಕೂಡ ಸೇರಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿ ಫರೊಗುದ್ದೀನ್ ಅಮಿರಿ ಹೇಳಿದ್ದಾರೆ. ಕಳೆದ 9 ತಿಂಗಳಲ್ಲಿ ಸುಮಾರು 6,000 ನಾಗರಿಕರನ್ನು ತಾಲಿಬಾನಿಗಳು ಹತ್ಯೆಗೈದಿದ್ದಾರೆ.
‘ವರ್ಷದ ಪದ’ ಆಯ್ಕೆಯಲ್ಲಿ ಆಕ್ಸ್’ಫರ್ಡ್ ನಿಘಂಟು ವಿಫಲ
ಅಲಿಎಕ್ಸ್’ಪ್ರೆಸ್ ಸೇರಿ 43 ಚೀನಾ ಆಪ್ ನಿಷೇಧಿಸಿದ ಕೇಂದ್ರ ಸರ್ಕಾರ
ಚಳಿಗಾಲ ಬಂದರೆ ಗುಲಾಬಿ ಬಣ್ಣದಿಂದ ಕಂಗೊಳಿಸುವ ಗ್ರಾಮ
ನಿವಾರ್ ಚಂಡಮಾರುತ; ಚೆನ್ನೈನ 3 ಬಂದರು ಬಂದ್, ಹೈ ಅಲರ್ಟ್
ಮಾಜಿ ಸಚಿವ ರೋಷನ್ ಬೇಗ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಬೆಂಗಳೂರು ವಿಮಾನ ನಿಲ್ದಾಣಕ್ಕಿನ್ನು ಹವಾಮಾನ ವೈಪರೀತ್ಯ ಸಮಸ್ಯೆ ಇಲ್ಲ
ಫೆ.26ರಿಂದ ಮೂರು ದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನ