ಕಂದಹಾರ್: ಅಫ್ಘಾನಿಸ್ತಾನದ ಸೇನಾಪಡೆಗಳು ಆಪರೇಷನ್ ಮೈವಾಡ್ ಹೆಸರಿನಲ್ಲಿ ಬುಧವಾರ ಕಂದಹಾರ್ ಪ್ರಾಂತ್ಯದಲ್ಲಿ 25 ಉಗ್ರರನ್ನು ಹತ್ಯೆಗೈದಿವೆ.
ದಾಳಿಯಲ್ಲಿ 5 ಉಗ್ರರು ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಫ್ಘನ್ ಸೇನಾಪಡೆ ವಕ್ತಾರರು ತಿಳಿಸಿದ್ದಾರೆ.
ನಿನ್ನೆಯಷ್ಟೇ (ಡಿ.24) 100 ಕ್ಕೂ ಹೆಚ್ಚು ಉಗ್ರರನ್ನು ಆಫ್ಘನ್ ಸೇನೆ ಹತ್ಯೆಗೈದಿತ್ತು.
ಕಂದಹಾರ್ ನಲ್ಲಿ 25 ಉಗ್ರರ ಹತ್ಯೆ
Follow Us