newsics.com
ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ.
ಸಿಡ್ನಿಯ ಬೋಂಡಿ ಬೀಚ್ ನಲ್ಲಿ ಈ ಫೋಟೋ ಶೂಟ್ ಮಾಡಲಾಗಿದೆ.
ಅಮೆರಿಕದ ಖ್ಯಾತ ಛಾಯಾಗ್ರಾಹಕ ಸ್ಪೆನ್ಸರ್ ಟುನಿಕ್ ಈ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಚರ್ಮ ಕ್ಯಾನ್ಸರ್ ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿದೆ.
2010ರಲ್ಲಿ ಕೂಡ ಇದೇ ರೀತಿಯ ಫೋಟೋ ಶೂಟ್ ಮಾಡಲಾಗಿತ್ತು.