Friday, May 20, 2022

ಮದುವೆಯಾಗುವವರಿಗೆ 4.2 ಲಕ್ಷ ರೂ. ಪ್ರೋತ್ಸಾಹಧನ; ಜಪಾನ್ ಸರ್ಕಾರ ಘೋಷಣೆ

Follow Us

newsics.com
ಟೋಕಿಯೋ: ಜನನ ಪ್ರಮಾಣ ಹೆಚ್ಚಿಸಲು ಮುಂದಾಗಿರುವ ಜಪಾನ್‌, ಮದುವೆ ಆಗುತ್ತಿರುವವರಿಗೆ ವಿನೂತನ ಆಫರ್ ನೀಡಿದೆ.
ಮುಂಬರುವ ಏಪ್ರಿಲ್‌ನಿಂದ ಪುರಸಭೆಯ ವ್ಯಾಪ್ತಿಯಲ್ಲಿಯೇ ಉಳಿಯಲು ಇಚ್ಛಿಸುವ ನವವಿವಾಹಿತರಿಗೆ ‘Newlyweds and New Life Support Project’ ಹೆಸರಿನ ಈ ಯೋಜನೆಯಡಿ ಆರು ಲಕ್ಷ ಯೆನ್‌ (4.2 ಲಕ್ಷ ರೂ.ಗಳು ) ನೆರವು ನೀಡಲು ಜಪಾನ್ ಸರ್ಕಾರ ನಿರ್ಧರಿಸಿದೆ.
ಈ ನೀತಿಯಲ್ಲಿ ಕೊಡಮಾಡುವ ಹಣವು ಬಾಡಿಗೆ, ರಿಬೇಟ್‌ಗಳು, ಹೂಡಿಕೆಗಳು ಸ್ಥಳಾಂತರದ ವೆಚ್ಚ ಸೇರಿದಂತೆ ಅನೇಕ ವೆಚ್ಚಗಳನ್ನು ಒಳಗೊಳ್ಳಲಿದೆ. ಈ ಯೋಜನೆಯ ಫಲಾನುಭವಿಗಳಾಗಲು ವಿವಾಹಿತ ಜೋಡಿಯ ವಯಸ್ಸು 40 ವರ್ಷಗಳ ಒಳಗೆ ಇರಬೇಕಿದ್ದು, ಇಬ್ಬರ ಒಟ್ಟು ಆದಾಯ 5.4 ದಶಲಕ್ಷ ಯೆನ್‌ಗಳಷ್ಟಿರಬೇಕು. ಸದ್ಯ ಚಾಲ್ತಿಯಲ್ಲಿರುವ ನೀತಿಯ ಪ್ರಕಾರ, 4.8 ದಶಲಕ್ಷ ಯೆನ್‌ಗಳಷ್ಟು ಒಟ್ಟಾರೆ ಆದಾಯವಿರುವ, 35 ವರ್ಷ ವಯಸ್ಸಿನೊಳಗಿನ ಜೋಡಿಗಳು ಈ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ. ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ಜಪಾನಿನ ಬಹುತೇಕರು ನಿಧಾನವಾಗಿ ಮದುವೆಯಾಗುವ ಅಥವಾ ಅವಿವಾಹಿತರಾಗಿ ಉಳಿಯಲು ನಿರ್ಧಾರ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಈ ಹೊಸ ಆಫರ್ ಯೋಜನೆ ಜಾರಿ ಮಾಡಿದೆ. ವಿಳಂಬ ಮದುವೆಗಳ ಕಾರಣದಿಂದಾಗಿ ಜಪಾನ್‌ನಲ್ಲಿ ಪ್ರತಿ ವರ್ಷವೂ ಜನನ ಪ್ರಮಾಣ ಕುಸಿಯುತ್ತಲೇ ಸಾಗುತ್ತಿದೆ. ಕಳೆದ ವರ್ಷ ಕೇವಲ 8,65,000 ರಷ್ಟು ಮಕ್ಕಳು ಜನಿಸಿವೆ.

ಮತ್ತಷ್ಟು ಸುದ್ದಿಗಳು

Latest News

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು, ನಾಲ್ವರನ್ನು ರಕ್ಷಿಸಿದ ಗ್ರಾಮಸ್ಥರು

newsics.com ಗದಗ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು ಹಾಗೂ ಅದರಲ್ಲಿದ್ದ ನಾಲ್ವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕುನ ನೆಲೋಗಲ್ ಗ್ರಾಮದ ಬಳಿ ಶುಕ್ರವಾರ...

ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ

newsics.com ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಭಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆದರಿಕೆ ಕರೆ ಮಾಡಿದ್ದ ಸುಭಾಷ್, ವಿಚ್ಛೇದಿತ...

ಮತ್ತೆ ಚಿನ್ನ, ಬೆಳ್ಳಿ ದುಬಾರಿ

newsics.com ಬೆಂಗಳೂರು: ಶುಕ್ರವಾರ (ಮೇ 20) ಚಿನ್ನ, ಬೆಳ್ಳಿ ಮತ್ತೆ ದುಬಾರಿಯಾಗಿದೆ. 10 ಗ್ರಾಂ ಚಿನ್ನಕ್ಕೆ 640 ರೂ. ಹೆಚ್ಚಳವಾಗಿದೆ. ಬೆಳ್ಳಿ 1 ಕೆಜಿಗೆ ಬರೋಬ್ಬರಿ 900 ರೂ. ಏರಿಕೆಯಾಗಿದೆ. ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ...
- Advertisement -
error: Content is protected !!