newsics.com
ವಾಷಿಂಗ್ಟನ್/ ಬೋಸ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಬೆನ್ನಲ್ಲೇ ದೇಶದಲ್ಲಿ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 1 ಕೋಟಿ ದಾಟಿದೆ. ಈ ಮೂಲಕ 1 ಕೋಟಿ ಸೋಂಕಿತರು ಕಂಡ ಮೊದಲ ದೇಶ ಎನಿಸಿಕೊಂಡಿದೆ.
ಜಾಗತಿಕವಾಗಿ ಕೊರೋನಾ ಸೋಂಕಿತರ ಸಂಖ್ಯೆ 5 ಕೋಟಿ ದಾಟಿದ ದಿನವೇ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1 ಕೋಟಿ ಗಡಿ ದಾಟಿದೆ.
ಅಮೆರಿಕ ಕೊರೊನಾ 3ನೇ ಅಲೆಗೆ ತತ್ತರಿಸಿದ್ದು, 293 ದಿನಗಳ ನಂತರ ಮತ್ತೆ ಪ್ರತಿದಿನ 1 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಶನಿವಾರ ಒಂದೇ ದಿನ 1,31,420 ಸೋಂಕು ಪ್ರಕರಣಗಳು ದೃಢಪಟ್ಟಿದ್ದವು. ಕಳೆದೊಂದು ವಾರದಿಂದ ಸುಮಾರು 1,05,600 ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಈವರೆಗೆ ಮಹಾಮಾರಿಗೆ 2,37,000 ಮಂದಿ ಬಲಿಯಾಗಿದ್ದಾರೆ.
ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ವರದಿ ಪ್ರಕಾರ, 50.2 ಮಿಲಿಯನ್’ಗಿಂತಲೂ ಅಧಿಕ ಸೋಂಕಿತರಿದ್ದಾರೆ. 1.2 ಮಿಲಿಯನ್ ಗಿಂತಲೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ನಿನ್ನೆ ವರದಿ ನೀಡಿದೆ. ಅಮೆರಿಕ ಜಗತ್ತಿನ ಜನಸಂಖ್ಯೆಯಲ್ಲಿ ಶೇಕಡಾ 4ರಷ್ಟು ಹೊಂದಿದ್ದು, ಇದುವರೆಗೆ 9.8 ಮಿಲಿಯನ್’ಗಿಂತಲೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ. 2 ಲಕ್ಷದ 37 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ ಹಾಪ್ ಕಿನ್ಸ್ ವರದಿ ನೀಡಿದೆ.
ಡಿಸೆಂಬರ್ 1ರಿಂದ ವಿಪ್ರೋದ 1.5 ಲಕ್ಷ ಸಿಬ್ಬಂದಿ ವೇತನ ಹೆಚ್ಚಳ
ಒಂದೇ ದಿನ 45, 903 ಮಂದಿಗೆ ಕೊರೋನಾ ಸೋಂಕು, 490 ಬಲಿ
ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಗಡಿಬಿಡಿ; ಪೋಷಕರ ಸಿಡಿಮಿಡಿ
ಬಳಸಿ ಬಿಸಾಡುವ ಕಪ್’ಗಳಲ್ಲಿ ಟೀ, ಕಾಫಿ ಕುಡಿವ ಮುನ್ನ ಯೋಚಿಸಿ