ಹೆರಾತ್ : ಪಶ್ಚಿಮ ಅಫ್ಘಾನ್‌ನ ಮೂರು ಪ್ರಾಂತ್ಯಗಳ 59 ತಾಲಿಬಾನ್ ಉಗ್ರರು ಸರ್ಕಾರಿ ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ.
ಅಬ್ ಕಮರಿ ಜಿಲ್ಲೆ, ಬಡ್ಗಿಸ್ ಪ್ರಾಂತ್ಯ, ಶರಕ್ ಜಿಲ್ಲೆ, ಘೋರ್ ಪ್ರಾಂತ್ಯ ಮತ್ತು ಹೆರಾತ್ ಪ್ರಾಂತ್ಯದ ಚಿಶ್ತಿ ಷರೀಫ್ ಜಿಲ್ಲೆಯಲ್ಲಿ ಸೋಮವಾರ ಒಟ್ಟು 59 ತಾಲಿಬಾನ್ ಉಗ್ರರು ಅಫಘಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ ಎಂದು ಅಫಘಾನ್ ರಾಷ್ಟ್ರೀಯ ಸೇನಾ ವಿಶೇಷ ಕಾರ್ಯಾಚರಣೆ ದಳ ಹೇಳಿಕೆಯಲ್ಲಿ ತಿಳಿಸಿದೆ.
ಶರಣಾದ ಉಗ್ರರಲ್ಲಿ ಮೂವರು ತಾಲಿಬಾನ್ ವಿಭಾಗೀಯ ಕಮಾಂಡರ್‌ಗಳಾದ ಮುಲ್ಲಾ ಅಬ್ದುಲ್ ನಾಸಿರ್, ಮುಲ್ಲಾ ಸಲಾಹುದ್ದೀನ್ ಮತ್ತು ಅಬ್ದುಲ್ ಹಾದ್ ಕೂಡ ಸೇರಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಫ್ಗಾನಿಸ್ತಾನದಲ್ಲಿ ಬಹುಕಾಲದಿಂದ ಸರ್ಕಾರ ಉಗ್ರ ಚಟುವಟಿಕೆಗಳ ವಿರುದ್ಧ ಯುದ್ಧ ಸಾರಿದೆ.
ಅಫ್ಘಾನ್‌ನಲ್ಲಿ 59 ತಾಲಿಬಾನ್ ಉಗ್ರರ ಶರಣಾಗತಿ
Follow Us