newsics.com
ಹರಾರೆ: ಚಿನ್ನದ ಗಣಿ ಕುಸಿದು ಆರು ಮಂದಿ ಕಾರ್ಮಿಕರು ಮೃತಪಟ್ಟು, ಹದಿನೈದು ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಜಿಂಬಾಬ್ವೆಯ ಬೇ ಹಾರ್ಸ್ ಗಣಿಯಲ್ಲಿ ನಡೆದಿದೆ.
ಆರು ಮೃತದೇಹಗಳನ್ನು ಗಣಿಯಿಂದ ಹೊರತೆಗೆಯಲಾಗಿದ್ದು, ಇನ್ನೂ 15 ಗಣಿಗಾರರು ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ.
23 ಮಂದಿ ಕಾರ್ಮಿಕರು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿತ ಸಂಭವಿಸಿದ್ದು 13 ಜನ ಅಪಾಯದಿಂದ ಪಾರಾಗಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ.