ವಾಷಿಂಗ್ಟನ್: ಮಾರಕ ಕೊರೋನಾ ಅಮೆರಿಕದಲ್ಲಿ ರಣಕೇಕೆ ಮುಂದುವರಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಅಮೆರಿಕದಲ್ಲಿ 62, 428 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇದರೊಂದಿಗೆ ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 35, 60, 364ಕ್ಕೆ ತಲುಪಿದೆ.
ಇದೇ ವೇಳೆ ಕಳೆದ ಒಂದೇ ದಿನ ಮಾರಕ ಕೊರೋನಾ ಅಮೆರಿಕದಲ್ಲಿ 974 ಮಂದಿಯನ್ನು ಬಲಿಪಡೆದುಕೊಂಡಿದೆ. ಅಮೆರಿಕದಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ 1, 38, 201ಕ್ಕೆ ತಲುಪಿದೆ. ನ್ಯೂಯಾರ್ಕ್ ನಗರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಫ್ಲೋರಿಡಾದಲ್ಲಿ ರೋಗ ವ್ಯಾಪಕವಾಗಿ ಹರಡುತ್ತಿದೆ ಎಂದು ವರದಿಯಾಗಿದೆ.