Tuesday, April 13, 2021

ಒಡೆಯನಿಗಾಗಿ ವುಹಾನ್ ಆಸ್ಪತ್ರೆಯಲ್ಲಿ ಕಾದು ಕುಳಿತ ಶ್ವಾನ

ವುಹಾನ್:  ಸ್ವಾಮಿ ನಿಷ್ಠೆಗೆ ಮತ್ತೊಂದು ಹೆಸರೇ ಶ್ವಾನ. ಮಾಲೀಕನ ಪ್ರಾಣ ರಕ್ಷಿಸಲು ಕೂಡ ಈ ಶ್ವಾನಗಳು ಹಿಂದೆ ಮುಂದೆ ನೋಡುವುದಿಲ್ಲ. ನೆರಳಿಗೆ ನೆರಳಾಗಿ ಮಾಲಿಕನ ಜತೆಯಲ್ಲಿಯೇ ಇರುತ್ತವೆ. ಇದೀಗ ಇಂತಹ ಒಂದು ಸುದ್ದಿ ಚೀನಾದ ವುಹಾನ್ ನಿಂದ ವರದಿಯಾಗಿದೆ. ನಾಯಿಯೊಂದು ತನ್ನ ಮಾಲಿಕನ ಆಗಮನಕ್ಕಾಗಿ ವುಹಾನ್ ನ ಆಸ್ಪತ್ರೆಯಲ್ಲಿಯೇ ಕಾಲ ಕಳೆಯುತ್ತಿದೆ. ವುಹಾನ್ ಮಾರಕ ಕೊರೋನಾದ ತವರೂರು ಎಂಬ ಕುಖ್ಯಾತಿ ಪಡೆದಿದೆ. ಪಾಪ ಈ ನಾಯಿಗೆ ತನ್ನ ಮಾಲೀಕ ಇನ್ನೆಂದೂ ತನ್ನನ್ನು ನೋಡಲು ಬರುವುದಿಲ್ಲ ಎಂಬ ಸತ್ಯ ಇದುವರೆಗೂ ತಿಳಿದಿಲ್ಲ. ಕೊರೋನೋ ಸೋಂಕಿತ ಮಾಲಿಕ ಆಸ್ಪತ್ರೆಗೆ ಸೇರಿಸಿದ ಐದು ದಿನಗಳ ಬಳಿಕ ಅಸು ನೀಗಿದ್ದಾನೆ. ಈ ಸತ್ಯ ನಾಯಿಗೆ ಹೇಗೆ ತಾನೆ ತಿಳಿಸಲು ಸಾಧ್ಯ.. ಆದರೆ ಅದು ತಿಳಿಯದ ಈ ಶ್ವಾನ, ಆಸ್ಪತ್ರೆಯ ವಠಾರದಲ್ಲಿಯೇ ಮಾಲಿಕನನ್ನು ಹುಡುಕಾಡುತ್ತಿದೆ. ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿಯೇ ಈ ನಾಯಿ ಠಿಕಾಣಿ ಹೂಡಿದೆ. ಆಸ್ಪತ್ರೆಯ ಸಿಬ್ಬಂದಿ  ವೂಹೋ ಕ್ಯೂಪನ್ ಎಂಬವರು ಮೊದಲು ಈ ಶ್ವಾನವನ್ನು ಆಸ್ಪತ್ರೆಯಲ್ಲಿ ಗುರುತಿಸಿದರು. ಅದಕ್ಕೆ ಪ್ರೀತಿಯಿಂದ  ಕ್ಸಿಯೋ ಬಾವೋ ಎಂದು ಹೆಸರಿಟ್ಟರು. ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಿಂದ ಹೊಡೆದೋಡಿಸಲು ಎಲ್ಲ ಯತ್ನ ನಡೆಸಿದರೂ ಶ್ವಾನ ಮಾತ್ರ ಎಲ್ಲರ ಕಣ್ಣು ತಪ್ಪಿಸಿ ಮತ್ತೆ ಅಲ್ಲಿಗೆ ಬರುತ್ತಿತ್ತು. ಕೊನೆಗೆ ಅದನ್ನು ಆಸ್ಪತ್ರೆಯಿಂದ ಓಡಿಸುವ ಪ್ರಯತ್ನ ಕೈ ಬಿಡಲಾಯಿತು. ಇದೀಗ ಈ  ಶ್ವಾನಕ್ಕೆ ಶ್ವಾನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!