ಬ್ರಿಟನ್​​ನಲ್ಲಿ ಕೋವಿಡ್​ 19 ಹೊಸ ರೂಪಾಂತರಿ ಪತ್ತೆ..!

newsics.com ಬ್ರಿಟನ್​​ನಲ್ಲಿ ಕೋವಿಡ್​ 19ನ ಹೊಸ ರೂಪಾಂತರವು ಕಂಡುಬಂದಿದೆ. ಬ್ರಿಟನ್​​ನ ಆರೋಗ್ಯ ಭದ್ರತಾ ಏಜೆನ್ಸಿಯು ಈ ಬಗ್ಗೆ ಅಧ್ಯಯನ ನಡೆಸುತ್ತಿದೆ ಎಂದು ಹೇಳಿದೆ. BA.1 ಮತ್ತು BA.2 ಓಮಿಕ್ರಾನ್ ತಳಿಗಳ ರೂಪಾಂತರ ಇದಾಗಿದ್ದು XE ರೂಪಾಂತರದ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ​​ ಎಚ್ಚರಿಕೆಯನ್ನು ನೀಡಿದೆ. ಈ ಹೊಸ ರೂಪಾಂತರಿಯು ಈ ಹಿಂದಿನ ಎಲ್ಲಾ ಕೋವಿಡ್​ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ ಹರಡಬಹುದು ಎಂದು ಅಂದಾಜಿಸಲಾಗಿದೆ.