newsics.com
ಕೆರೊಲಿನಾ(ಅಮೆರಿಕ): ಬಿಗಿಯಾದ ಜೀನ್ಸ್ ಧರಿಸಿದ ಹುಡುಗಿಯೊಬ್ಬಳು ಆಸ್ಪತ್ರೆ ಸೇರಿದ ಘಟನೆ ಉತ್ತರ ಕೆರೊಲಿನಾದಲ್ಲಿ ನಡೆದಿದೆ.
ಸ್ಯಾಮ್ ಎಂಬಾಕೆ ಬಿಗಿಯಾದ ಉಡುಪಿನಿಂದ ತಾನು ಅನುಭವಿಸಿದ ಸನಸ್ಯೆಯನ್ನು ಸಾಮಾಜಿಕ ಜಾಲತಾಣ ಟಿಕ್ ಟಾಕ್ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಭಾರೀ ವೈರಲ್ ಆಗಿದೆ. ಕೆಲವೇ ಸಮಯದಲ್ಲಿ 80 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಪಡೆದುಕೊಂಡಿದೆ.
ಸ್ಯಾಮ್ ಟೈಟ್ ಜೀನ್ಸ್ ಸ್ಕರ್ಟ್ ಧರಿಸುತ್ತಿದ್ದು, ಇದರಿಂದ ಆಕೆಗೆ ಚರ್ಮದ ಸೋಂಕು ತಗುಲಿದೆ. ಸಮಸ್ಯೆ ಎಷ್ಟು ತೀವ್ರವಾಗಿತ್ತೆಂದರೆ ಆಕೆಯನ್ನು ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಳಂತೆ. ಬಾಯ್ ಫ್ರೆಂಡ್ ಜತೆ ಡೇಟ್ಸ್ ಹೋಗುವ ವೇಳೆ ಟೈಟ್ ಜೀನ್ಸ್ ಧರಿಸಿದ್ದಳಂತೆ. ಸುಮಾರು 8 ಗಂಟೆಗಳ ಕಾಲ ಅದನ್ನು ಧರಿಸಿದ್ದವಳಿಗೆ ಸೊಂಟದ ಕೆಳಗೆ ನೋವು ಕಾಣಿಸಿತ್ತಂತೆ. ವೈದ್ಯರ ಬಳಿ ಹೋದಾಗ, ಚರ್ಮದ ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ದರಂತೆ. ಆಕೆಗೆ ಸೆಪ್ಸಿಸ್ ಮತ್ತು ಸೆಲ್ಯುಲೈಟಿಸ್ ಆಗಿತ್ತಂತೆ. ಆರು ದಿನಗಳ ಬಳಿಕ ತಾನು ಸುಧಾರಿಸಿಕೊಂಡಿದ್ದಾಗಿ ಸ್ಯಾಮ್ ಹೇಳಿಕೊಂಡಿದ್ದಾಳೆ.