newsics.com
ಮೆಸಚೂಸೆಟ್ಸ್(ಅಮೆರಿಕ): ಆರು ಕಾಲಿನ ಎರಡು ತಲೆಯ ಡೈಮಂಡ್ ಬ್ಯಾಕ್ ಟೆರಾಪಿನ್ ಆಮೆ ಅಮೆರಿಕದ ಮೆಸಚೂಸೆಟ್ಸ್ ನಲ್ಲಿರುವ ಬರ್ಡ್ಸಿ ಕೇಪ್ ವನ್ಯಜೀವಿ ಕೇಂದ್ರದಲ್ಲಿ ಜನಿಸಿದೆ.
ಯುಎಸ್ ರಾಜ್ಯದಲ್ಲಿ ಆಮೆ ಪ್ರಭೇದಕ್ಕೆ ಅಪಾಯವಿರುವುದರಿಂದ ಈ ಆಮೆಯ ಜನನ ಹೊಸ ಉತ್ಸಾಹ ಮೂಡಿಸಿದೆ.
ಈ ಆಮೆಗೆ ಮೇರಿ-ಕೇಟ್ ಮತ್ತು ಆಶ್ಲೇ ಓಲ್ಸೆನ್ ಎಂದು ಅವಳಿ ನಕ್ಷತ್ರಗಳ ಹೆಸರನ್ನು ಇಡಲಾಗಿದೆ. ಪಶುವೈದ್ಯೆ ಪ್ರಿಯಾ ಪಟೇಲ್ ಮತ್ತು ಪ್ರಾಣಿ ಆಶ್ರಯದಲ್ಲಿರುವ ಇತರ ಸಿಬ್ಬಂದಿ ಅಪರೂಪದ ಆಮೆಯ ಆರೈಕೆ ಮಾಡುತ್ತಿದ್ದಾರೆ.
ನಾಲ್ಕು ವಾರಗಳ ವಯಸ್ಸನ್ನು ತಲುಪಿದಾಗ ಅದರ ರಕ್ತಪರಿಚಲನಾ ವ್ಯವಸ್ಥೆಯನ್ನು ಪರೀಕ್ಷಿಸಲು ಸಿಟಿ ಸ್ಕ್ಯಾನ್ ಮಾಡಲು ನಿರ್ಧರಿಸಿದ್ದಾರೆ. ಎರಡು ತಲೆಯ ಹ್ಯಾಚಿಂಗ್ ಅನುವಂಶಿಕ ರೂಪಾಂತರದ ಪರಿಣಾಮದಿಂದ ಈ ಆಮೆ ಜನಿಸಿದೆ ಎಂದು ವರದಿಗಳು ಹೇಳಿವೆ.
ರಾಜ್ಯದಲ್ಲಿ ಹೊಸದಾಗಿ 310 ಕೊರೋನಾ ಪ್ರಕರಣ ಪತ್ತೆ, 347 ಸೋಂಕಿತರು ಗುಣಮುಖ, 6 ಸಾವು