Wednesday, May 31, 2023

ಭೀಕರ ಕಾಡ್ಗಿಚ್ಚು, 20ಕ್ಕೂ ಹೆಚ್ಚು ಮಂದಿ ಸಾವು

Follow Us

newsics.com
ಅಮೆರಿಕ: ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚಿನಿಂದ ಪರ್ವತ ತಪ್ಪಲಿನ ಗ್ರಿಡ್ಲೆ ಸನಿಹದ ಗ್ರಾಮವೊಂದು ಸಂಪೂರ್ಣ ನಾಶವಾಗಿದ್ದು, 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
ಹಿಂದೆಂದೂ ಕಂಡು ಕೇಳರಿಯದಷ್ಟು ಭೀಕರವಾಗಿರುವ ಕಾಡ್ಗಿಚ್ಚಿನಿಂದ 18 ಮಂದಿ ನಾಪತ್ತೆಯಾಗಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಗುರುವಾರ ಕಾಡ್ಬಿಚ್ಚಿನಿಂದ ಉಂಟಾದ ಭಾರೀ ಸ್ಫೋಟದಿಂದಾಗಿ ಒಂದೇ ದಿನ 25 ಮೈಲಿ ಪ್ರದೇಶ ಬೆಂಕಿಗಾಹುತಿಯಾಗಿದೆ.
ಬಿರುಗಾಳಿಯಿಂದಾಗಿ ಕಾಡ್ಗಿಚ್ಚು ಮತ್ತಷ್ಟು ಪ್ರದೇಶಗಳಿಗೆ ವ್ಯಾಪಿಸುತ್ತಿದ್ದು, ಹಲವು ಮನೆಗಳು ಸುಟ್ಟು ಕರಕಲಾಗಿವೆ. ಇದೇ ಮೊದಲ ಬಾರಿ ಸುಮಾರು ಎರಡು ದಶಲಕ್ಷ ಎಕರೆ ಪ್ರದೇಶ ಸುಟ್ಟಿದೆ. ಅರಣ್ಯದಲ್ಲಿ ಜೀವ ಸಂಕುಲಗಳು ಮತ್ತು ಅಪರೂಪದ ಸಸ್ಯ ವರ್ಗಗಳು ಸುಟ್ಟು ಹೋಗಿವೆ. ಕಾಡ್ಗಿಚ್ಚು ಶಮನಕ್ಕೆ 20,000 ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ಧಾರೆ. ಇದಕ್ಕಾಗಿ ಹೆಲಿಕಾಪ್ಟರ್‍ಗಳನ್ನು ಬಳಸಿಕೊಳ್ಳಲಾಗಿದೆ. ಈವರೆಗೆ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮತ್ತಷ್ಟು ಸುದ್ದಿಗಳು

vertical

Latest News

ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ 4 ವಾರಗಳ ತಾತ್ಕಾಲಿಕ ರಿಲೀಫ್

newsics.com ಬೆಂಗಳೂರು: ಟಿಪ್ಪು ರೀತಿ ಸಿದ್ದರಾಮಯ್ಯರನ್ನು ಮುಗಿಸಬೇಕು ಎಂದಿದ್ದ ಮಾಜಿ ಮಂತ್ರಿ ಅಶ್ವಥ್‍ ನಾರಾಯಣ್‍ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ. ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್...

ಸಾಮಾಜಿಕ ಜಾಲತಾಣಗಳಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ: ಸುಪ್ರೀಂ ಕೋರ್ಟ್‌ ಆದೇಶ

newsics.com ನವದೆಹಲಿ: ಸೋಷಿಯಲ್ ಮೀಡಿಯಾದಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ಜಿಲ್ಲಾ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಿರುವುದನ್ನು...

ಪತಿಯ ಮೃತದೇಹವನ್ನು ಮನೆಯೊಳಗೆ ದಹನ ಮಾಡಿದ ಮಾನಸಿಕ ಅಸ್ವಸ್ಥ ಹೆಂಡತಿ

newsics.com ಕರ್ನೂಲು: ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಮಹಿಳೆಯೊಬ್ಬರು ತಮ್ಮ ಪತಿಯ ಮೃತದೇಹವನ್ನು ಏಕಾಂಗಿಯಾಗಿ ಮನೆಯಲ್ಲಿಯೇ ದಹನ ಮಾಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪಾತಿಕೊಂಡ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಲಿತಮ್ಮ ಎಂಬವರ ಪತಿ...
- Advertisement -
error: Content is protected !!