newsics.com
ಕಾಬೂಲ್: ಅಫ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನಿಗಳ ಕೈ ವಶವಾಗುವ ಹಂತದಲ್ಲಿದೆ. ಇದರ ಬೆನ್ನಲ್ಲೆ ಅಶ್ರಫ್ ಘನಿ ಅಧ್ಯಕ್ಷ ಸ್ಥಾನದಿಂದ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಹೀಗಾಗಿ ಖುದ್ದು ಅಶ್ರಫ್ ಅವರೇ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದು, ರಾಜೀನಾಮೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ವರದಿ ತಿಳಿಸಿದೆ.
ಅಫ್ಘಾನಿಸ್ತಾನದಲ್ಲಿ ಮತ್ತೆ ಶಾಂತಿ-ಸ್ಥಿರತೆ ಸ್ಥಾಪನೆಗೆ ಎದುರು ನೋಡುತ್ತಿದ್ದೇವೆ. ಈ ಕುರಿತು ಭದ್ರತಾ ಪಡೆ ಹಾಗೂ ಜನಪ್ರತಿನಿಧಿಗಳು, ಅಂತಾರಾಷ್ಟ್ರೀಯ ಸಹಭಾಗಿಗಳೊಂದಿಗೆ ಚರ್ಚೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.
ಈಗಾಗಲೇ ತಾಲಿಬಾನಿಗಳು
ರಾಜಧಾನಿ ಕಾಬೂಲ್ ಹೊಸ್ತಿಲಿಗೆ ಕಾಲಿಟ್ಟಿದ್ದು, ಕಂದಹಾರ್ ನ ಪ್ರಮುಖ ರೇಡಿಯೋ ಕೇಂದ್ರವನ್ನು ವಶಪಡಿಸಿಕೊಂಡಿದ್ದಾರೆ. ಅದಕ್ಕೆ ವಾಯ್ಸ್ ಆಫ್ ಷರಿಯಾ ಎಂದು ಮರು ನಾಮಕರಣ ಮಾಡಿದ್ದಾರೆ. ಇಲ್ಲಿ ಸುದ್ದಿ, ರಾಜಕೀಯ ವಿಶ್ಲೇಷಣೆ ಮತ್ತು ಕುರಾನ್ ಪಠಣ ಪ್ರಸಾರ ಮಾಡಲಾಗುವುದು ಎಂದು ತಾಲಿಬಾನಿಗಳ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.