ಕೊರೋನಾದಿಂದ ಮೃತಪಟ್ಟ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು

NEWSICS.COM ವಾಷಿಂಗ್ಟನ್: ಉತ್ತರ ಡಕೋಟಾದ ಬಿಸ್ಮಾರ್ಕ್ ಅಭ್ಯರ್ಥಿಯಾಗಿದ್ದ ರಿಪಬ್ಲಿಕನ್ ನಾಯಕ ಡೇವಿಡ್ ಆಂದಲ್ (55) ಅಕ್ಟೋಬರ್ 5 ರಂದು ಕರೋನಾ ಸೋಂಕಿನಿಂದ ಮೃತಪಟ್ಟಿದ್ದರು. ಆದರೆ ರಾಜ್ಯದ ಅಸೆಂಬ್ಲಿಗೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂಬುದಾಗಿ ಇಂದು ಪ್ರಕಟಿಸಲಾಗಿದೆ. ಡೇವಿಡ್ ಮೃತಪಟ್ಟ ಒಂದು ತಿಂಗಳ ನಂತರ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಮೃತ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ. ಸಲಿಂಗಿ ದಂಪತಿಗೆ ರಕ್ಷಣೆ ನೀಡಿ: ಅಲಹಾಬಾದ್ ಹೈಕೋರ್ಟ್ ಆದೇಶ