ಅಲಾಸ್ಕ(ಅಮೆರಿಕ): ಅಮೆರಿಕದ ಅಲಾಸ್ಕದಲ್ಲಿ ಆಕಾಶದಲ್ಲಿ ಎರಡು ವಿಮಾನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಏಳು ಪ್ರಯಾಣಿಕರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಒರ್ವ ಜನಪ್ರತಿನಿಧಿ ಕೂಡ ಸೇರಿದ್ದಾರೆ.ಮೃತಪಟ್ಟ ಜನ ಪ್ರತಿನಿಧಿಯನ್ನು ಗ್ಯಾರಿನೂಪ್ ಎಂದು ಗುರುತಿಸಲಾಗಿದೆ.
ಅಲಸ್ಕಾ ಸಮೀಪದ ಕೆನೈ ಪೆನಿನ್ಸುಲಾದ ಬಳಿ ಈ ದುರಂತ ಸಂಭವಿಸಿದೆ. ಗ್ಯಾರಿ ನೂಪ್ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ದಕ್ಷಿಣ ಕರೋಲಿನಾದಿಂದ ಅಲಸ್ಕಾಕ್ಕೆ ಬರುತ್ತಿದ್ದ ವಿಮಾನ ಡಿಕ್ಕಿ ಹೊಡೆಯಿತು. ಈ ವಿಮಾನದಲ್ಲಿ ನಾಲ್ಕು ಪ್ರಯಾಣಿಕರು, ಪೈಲಟ್ ಮತ್ತು ಓರ್ವ ಗೈಡ್ ಪ್ರಯಾಣಿಸುತ್ತಿದ್ದರು.
2019ರಲ್ಲಿ ಕೂಡ ಅಲಸ್ಕಾದಲ್ಲಿ ಇದೇ ರೀತಿಯ ವಿಮಾನ ಅಪಘಾತ ಸಂಭವಿಸಿತ್ತು. ಈ ವಿಮಾನ ದುರಂತದಲ್ಲಿ ಆರು ಮಂದಿ ಸಾವನ್ನಪ್ಪಿದ್ದರು.