newsics.com
ಬ್ರಸೆಲ್ಸ್ (ಬೆಲ್ಜಿಯಮ್): ಬೆಲ್ಜಿಯಮ್ನ ನೂತನ ಪ್ರಧಾನಿಯಾಗಿ ಉದಾರವಾದಿ ನಾಯಕ ಅಲೆಕ್ಸಾಂಡರ್ ಡಿ ಕ್ರೂ ನೇಮಕಗೊಂಡಿದ್ದಾರೆ.
ಹಣಕಾಸು ಸಚಿವ ಡಿ ಕ್ರೂರನ್ನು ಪ್ರಧಾನಿಯಾಗಿ ನೇಮಿಸಿರುವುದನ್ನು ಅವರ ಎದುರಾಳಿ ಪೌಲ್ ಮ್ಯಾಗ್ನೆಟ್ ಖಚಿತಪಡಿಸಿದ್ದಾರೆ.
16 ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ನಿರ್ಣಾಯಕ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ, ಅವರು 7 ಪಕ್ಷಗಳ ಮೈತ್ರಿ ಸರ್ಕಾರದ ಮುಖ್ಯಸ್ಥರಾಗಿ ಹೊರಹೊಮ್ಮಿದ್ದಾರೆ.
ಚಾರ್ಲ್ಸ್ ಮೈಕಲ್ರ ಸರ್ಕಾರ ಪತನಗೊಂಡ ಬಳಿಕ, 21 ತಿಂಗಳುಗಳ ಕಾಲ ಬೆಲ್ಜಿಯಮ್ನಲ್ಲಿ ಬಹುಮತದ ಸರ್ಕಾರವಿರಲಿಲ್ಲ. 493 ದಿನಗಳ ಹಿಂದೆ ಚುನಾವಣೆ ನಡೆದರೂ ಸರ್ಕಾರದ ಮುಖ್ಯಸ್ಥರನ್ನು ಈಗ ಆಯ್ಕೆ ಮಾಡಲಾಗಿದೆ.
ಬೆಲ್ಜಿಯಮ್ ನೂತನ ಪ್ರಧಾನಿಯಾಗಿ ಅಲೆಕ್ಸಾಂಡರ್
Follow Us