Wednesday, July 6, 2022

ದೂರವಾಯ್ತು ಆತಂಕ; ಸೊಳ್ಳೆಗಳಿಂದ ಕೊರೋನಾ ಬರಲ್ಲ

Follow Us

ವಾಷಿಂಗ್ಟನ್: ಹಲವು ರೂಪಾಂತರಗಳನ್ನು ಹೊಂದುತ್ತಲೇ ಇರುವ ಕೊರೋನಾದ ಬಗ್ಗೆ ಇದ್ದ ಒಂದು ದೊಡ್ಡ ಅನುಮಾನಕ್ಕೆ ಈಗ ಸ್ಪಷ್ಟ ಉತ್ತರ ಸಿಕ್ಕಿದೆ. ಸೊಳ್ಳೆಯಿಂದ ಕೊರೋನಾ ಬರುವುದಿಲ್ಲ ಎಂಬ ವಿಚಾರ ನಮ್ಮಲ್ಲಿನ ಭಾರೀ ಆತಂಕವನ್ನು ದೂರ ಮಾಡಿದೆ.
ವಿಶ್ವದೆಲ್ಲೆಡೆ ತಲ್ಲಣ ತಂದಿರುವ ಕೊರೊನಾ ವೈರಸ್ ಸೊಳ್ಳೆಯಿಂದ ಮನುಷ್ಯರಿಗೆ ಹರಡುತ್ತದೆಯೇ ಎನ್ನುವ ಕುರಿತಾಗಿ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ನೆಮ್ಮದಿಯ ಮಾಹಿತಿ ಹೊರಬಿದ್ದಿದೆ.

ಯೂರೋಪಿಯನ್ ರಾಷ್ಟ್ರಗಳಲ್ಲಿ ಮಿಂಕ್ ಅಂದ್ರೆ ಭಾರೀ ಭಯ!

ಸೊಳ್ಳೆಗಳು ವೈರಸ್ ಹರಡಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮೊದಲೇ ಖಚಿತವಾಗಿ ಹೇಳಿತ್ತು. ಆದರೂ ಮುಂಜಾಗ್ರತಾ ಕ್ರಮವಾಗಿ ತಜ್ಞರು ನಡೆಸಿದ ಅಧ್ಯಯನದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಿದ್ಧಾಂತವನ್ನು ಬೆಂಬಲಿಸುವ ಫಲಿತಾಂಶವೇ ಸಿಕ್ಕಿದೆ. ಸೈಂಟಿಫಿಕ್ ರಿಪೋರ್ಟ್ ಜರ್ನಲ್’ನಲ್ಲಿ ಪ್ರಕಟವಾದ ಸಂಶೋಧನೆ ಲೇಖನದ ಪ್ರಕಾರ, ಸೊಳ್ಳೆಗಳಿಂದ ಕೊರೊನಾ ವೈರಸ್ ಹರಡಲು ಸಾಧ್ಯವಿಲ್ಲವೆಂದು ತಿಳಿಸಲಾಗಿದೆ. ಈಡೀಸ್ ಈಜಿಪ್ಟಿ, ಈಡೀಸ್ ಅಲ್ಬೋಪಿಕ್ಟುಸ್, ಕ್ಯಲೆಕ್ಸ್ ಕ್ವಿನ್ ಕ್ವೆಫಾಸ್ಕಿಟಸ್ ಸೊಳ್ಳೆಗಳ ಪ್ರಭೇದಗಳ ಅಧ್ಯಯನದಲ್ಲಿ ಇದು ಗೊತ್ತಾಗಿದೆ. ಕೊರೋನಾ ಸೋಂಕು ಉಗಮ ಸ್ಥಾನ ಚೀನಾದಲ್ಲಿ ಈ ಸೊಳ್ಳೆಗಳ ಪ್ರಭೇದಗಳಿದ್ದುದು ಈ ಅನುಮಾನಕ್ಕೆ ಕಾರಣವಾಗಿತ್ತು. ಅಮೆರಿಕದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿ ಅಧ್ಯಯನ ಸಂಶೋಧಕ ಸ್ಟೀಫನ್ ಹಿಗ್ಸ್ ನೀಡಿರುವ ಮಾಹಿತಿಯಂತೆ, ಸೊಳ್ಳೆಗಳಿಂದ ಸೋಂಕು ಹರಡುವ ಸಾಧ್ಯತೆ ಇಲ್ಲ ಎನ್ನುವುದು ದೃಢಪಟ್ಟಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಲಿಂಗಾಯಿತ ಸಂಪ್ರದಾಯದಂತೆ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

newsics.com ಹುಬ್ಬಳ್ಳಿ:  ದುಷ್ಕರ್ಮಿಗಳ ದಾಳಿಯಿಂದ ಮೃತಪಟ್ಟಿರುವ ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್ ಗುರೂಜಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಲಾಗಿದೆ. ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಇಬ್ಬರು ಸ್ವಾಮೀಜಿಗಳು...

ರಷ್ಯಾ ಕ್ಷಿಪಣಿ ದಾಳಿಗೆ ಬ್ರೆಜಿಲ್ ಮಾಡೆಲ್ ಸಾವು

newsics.com ಮಾಸ್ಕೋ: ಉಕ್ರೇನ್  ವಿರುದ್ಧ ರಷ್ಯಾ ನಡೆಸುತ್ತಿರುವ ಹೋರಾಟದಲ್ಲಿ ಬ್ರೆಜಿಲ್ ನ ರೂಪದರ್ಶಿಯೊಬ್ಬರು ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ರೂಪದರ್ಶಿಯನ್ನು  ಬ್ರೆಜಿಲ್ ನ  ಥಾಲಿತಾ ಡೂ ವಲ್ಲೆ ಎಂದು ಗುರುತಿಸಲಾಗಿದೆ. ಥಾಲಿತಾ  ಉಕ್ರೇನ್ ಪರವಾಗಿ ಹೋರಾಟ ಮಾಡುತ್ತಿದ್ದರು. ಬಂದೂಕು ಬಳಕೆಯಲ್ಲಿ...

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ,  ಮೊಹಮ್ಮದ್ ನದೀಂ , ಸಚ್ಚಿಂದ್ರನ್ ಮತ್ತು...
- Advertisement -
error: Content is protected !!