newsics.com
ವಾಷಿಂಗ್ಟನ್: ಆನ್ ಲೈನ್ ಮಾರಾಟ ಕ್ಷೇತ್ರದ ದಿಗ್ಗಜ ಅಮೆಜಾನ್ ವಿಶ್ವದಾದ್ಯಂತ 20,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲು ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ. ಮುಂದಿನ ತಿಂಗಳಲ್ಲಿ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.
ಈ ಮೊದಲು ಸಂಸ್ಥೆ 10,000 ಸಿಬ್ಬಂದಿ ಕಡಿತಕ್ಕೆ ತೀರ್ಮಾನಿಸಿದೆ ಎಂದು ವರದಿಯಾಗಿತ್ತು. ಮುಂದಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲ ಹಂತದ ಕಾರ್ಮಿಕರ ಸಂಖ್ಯೆಯಲ್ಲಿ ಕಡಿತ ಮಾಡಲು ಸಂಸ್ಥೆ ಪ್ಲ್ಯಾನ್ ಮಾಡಿದೆ ಎಂದು ಕಂಪ್ಯೂಟರ್ ವರ್ಲ್ಡ್ ವರದಿ ಮಾಡಿದೆ.
ಅಮೆಜಾನ್ ಸಂಸ್ಥೆಯಲ್ಲಿ ಒಂದರಿಂದ 7ರ ತನಕ ಶ್ರೇಣಿಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕದಲ್ಲಿನ ಆರ್ಥಿಕ ಹಿಂಜರಿತ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ವಾಣಿಜ್ಯ ಪೈಪೋಟಿಯಿಂದ ಸಿಬ್ಬಂದಿ ಸಂಖ್ಯೆ ಕಡಿತಕ್ಕೆ ಅಮೆಜಾನ್ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ