Wednesday, May 25, 2022

67 ವರ್ಷಗಳಿಂದ ಸ್ನಾನ ಮಾಡದ ಆರೋಗ್ಯವಂತ ವ್ಯಕ್ತಿ!

Follow Us

newsics.com

ಇರಾನ್: ಇಲ್ಲೊಬ್ಬ ವ್ಯಕ್ತಿ 67 ವರ್ಷಗಳಿಂದ ಸ್ನಾನವನ್ನು ಮಾಡದೆ, ಕೊಚ್ಚೆ ನೀರು ಕುಡಿದುಕೊಂಡು ಎಲ್ಲೆಂದರಲ್ಲಿ ಸಿಕ್ಕ ಆಹಾರವನ್ನು ಸೇವಿಸುತ್ತಾ ಬದುಕುತ್ತಿದ್ದಾರೆ. ಅಂತಹ ವ್ಯಕ್ತಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಆರು ದಶಕಗಳ ಹಿಂದೆ ಮನೆಯನ್ನು ತೊರೆದು ಸಣ್ಣ ಗುಡಿಸಿಲಿನಲ್ಲಿ ವಾಸಿಸುವ ಅಮೌ ಜಾಜಿ ಮೊಲ ಮತ್ತು ಮುಳ್ಳುಹಂದಿಗಳನ್ನು ಆಹಾರವನ್ನಾಗಿಸಿಕೊಂಡಿದ್ದಾರೆ. ಸದಾ ಕಾಲ ಒಂಟಿಯಾಗಿರುವ ಇವರು ಕೊಚ್ಚೆ ನೀರನ್ನು ಸೇವಿಸುತ್ತಾರೆ. ಆದರೂ ಇವರ ದೇಹದಲ್ಲಿ ಬ್ಯಾಕ್ಟಿರಿಯಾಗಳು ಬೆಳವಣಿಗೆಯಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸದಾ ಕಾಲ ಒಂಟಿಯಾಗಿರುವ ಅಮೌ ಜಾಜಿ ಸ್ನೇಹಿತರನ್ನು ಹೊಂದಿಲ್ಲ. ಒಬ್ಬಂಟಿಯಾಗಿ ಕುಳಿತ ಅವರು ಪ್ರಾಣಿಗಳ ಗೊಬ್ಬರವನ್ನು ಪೈಪ್ನಲ್ಲಿ ತುಂಬಿಸಿಕೊಂಡು ಧೂಮಪಾನದ ರೀತಿ ಸೇವಿಸುತ್ತಾರೆ. ವರದಿಯ ಪ್ರಕಾರ ಅದು ಅವರ ನೆಚ್ಚಿನ ಸಮಯವಾಗಿದೆ.

87 ವರ್ಷದ ಈ ವ್ಯಕ್ತಿ ಇರಾನ್ನ ದೇಜ್ಗಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಮೊದಲು ಭೂಮಿಯಲ್ಲಿ ರಂಧ್ರವನ್ನು ಕೊರೆದು ವಾಸಿಸುತ್ತಿದ್ದರು ಎನ್ನಲಾಗಿದ್ದು, ಅವರ ಪರಿಸ್ಥಿತಿ ಕಂಡು ಸ್ಥಳೀಯರು ಗುಡಿಸಲನ್ನು ನಿರ್ಮಿಸಿಕೊಟ್ಟಿದ್ದಾರೆ. ಆರು ದಶಕಗಳ ಕಾಲ ಸ್ನಾನ ಮಾಡದೆ, ಸರಿಯಾದ ಆಹಾರವನ್ನೂ ತೆಗೆದುಕೊಳ್ಳದೇ ಇರುವ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳ ಅಧ್ಯಯನ ಮಾಡಲು ವಿಜ್ಞಾನಿಗಳು ನಿರ್ಧರಿಸಿದ್ದರು. ಆದರೆ 87 ವರ್ಷದ ಈ ವ್ಯಕ್ತಿಯಲ್ಲಿ ಯಾವುದೇ ಬ್ಯಾಕ್ಟೀರಿಯಾಗಳು ಕಾಣದ ಹಿನ್ನೆಲೆಯಲ್ಲಿ ವಿಜ್ಞಾನಗಳೇ ದಂಗಾಗಿದ್ದಾರೆ.

ಜೋಡಿ ಗೂಬೆಗಳು ಚುಂಬಿಸುವ ಫೋಟೊಗಳು ವೈರಲ್!

ಮತ್ತಷ್ಟು ಸುದ್ದಿಗಳು

Latest News

ನಿರೂಪಕಿಯರು​ ಮುಖ ಮುಚ್ಚಿಕೊಳ್ಳಿ ಎಂದ ತಾಲಿಬಾನ್​ ವಿರುದ್ಧ ಫೇಸ್​ಮಾಸ್ಕ್​ ಅಭಿಯಾನ!

newsics.com ಮಹಿಳಾ ನಿರೂಪಕರಿಗೆ ಕೆಲಸದ ಸ್ಥಳದಲ್ಲಿ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು ಎಂದು ತಾಲಿಬಾನ್​ ಹೊರಡಿಸಿರುವ ಆದೇಶವನ್ನು ವಿರೋಧಿಸಿರುವ ಅಫ್ಘಾನಿಸ್ತಾನದ ಪುರುಷ ಸುದ್ದಿ ವಾಚಕರು ಸೋಶಿಯಲ್​ ಮೀಡಿಯಾದಲ್ಲಿ ಹೊಸ...

ಕೊಡಗಿನಲ್ಲಿ ಇದ್ದಕಿದ್ದಂತೆ ಕಾಣಿಸಿಕೊಂಡ ಕೆಮ್ಮು, ಕಣ್ಣಿನ ಉರಿ ; ಹೆಚ್ಚಿದ ಆತಂಕ

newsics.com ಮಡಿಕೇರಿ: ಇದ್ದಕಿದ್ದಂತೆ ಒಮ್ಮೆಲೆ ಅನೇಕ ಮಂದಿಯಲ್ಲಿ ಕೆಮ್ಮು ಮತ್ತು ಕಣ್ಣಿನ ಉರಿ ಕಾಣಿಸಿಕೊಂಡಿದ್ದು, ಕೊಡಗಿನ ಸಿದ್ದಾಪುರ ಮತ್ತು ವಿರಾಜಪೇಟೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಮಾಸ್ಕ್ ಧರಿಸುವಂತೆ ಸ್ಥಳೀಯರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಸಿದ್ದಾರೆ....

ಏರಿಕೆ ಕಂಡ ಚಿನ್ನದ ಬೆಲೆ ; ಬೆಳ್ಳಿ ಬೆಲೆಯಲ್ಲಿ 500 ರೂ. ಇಳಿಕೆ

newsics.com ದೆಹಲಿ: ದೇಶದಲ್ಲಿ 2 ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಇಂದು ಚಿನ್ನದ ಬೆಲೆ 10 ಗ್ರಾಂ.ಗೆ 660 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯು ಒಂದೇ ದಿನದಲ್ಲಿ 500 ರೂ. ಇಳಿಕೆಯಾಗಿದೆ. ನಿನ್ನೆ ದೇಶದಲ್ಲಿ...
- Advertisement -
error: Content is protected !!