NEWSICS.COM
ಇಟಲಿ: ಇಟಲಿಯ ಪುರಾತತ್ವ ತಜ್ಞರು ಪೊಂಪೈನಲ್ಲಿ 2,000 ವರ್ಷಗಳಷ್ಟು ಹಳೆಯದಾದ ಫಾಸ್ಟ್ ಫುಡ್ ಆಹಾರದ ಅಂಗಡಿಯನ್ನು ಪತ್ತೆ ಮಾಡಿದ್ದಾರೆ.
ಪ್ರಾಚೀನ ಕಾಲದ ನಗರವಾದ ಪೊಂಪೈನಲ್ಲಿ ಶನಿವಾರ ಉತ್ಖನನ ನಡೆಸುತ್ತಿರುವ ಇಟಾಲಿಯನ್ ಪುರಾತತ್ವ ತಜ್ಞರು ರೋಮನ್ ಯುಗದ ‘ಥರ್ಮೋಪೋಲಿಯಮ್’ ಅಥವಾ ಫಾಸ್ಟ್-ಫುಡ್ ಕೌಂಟರ್ ಅನ್ನು ಕಂಡುಹಿಡಿದಿದ್ದಾರೆ ಎಂದು ವರದಿಯಾಗಿದೆ.
44 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಪೋಂಪೈನಗರದ ಬಳಿ
ಕ್ರಿ.ಶ 79 ರಲ್ಲಿ ವೆಸುವಿಯಸ್ ಪರ್ವತದ ಜ್ವಾಲಾಮುಖಿ ಸ್ಫೋಟಗೊಂಡಾಗ ಪೊಂಪೈಯ ನಗರ ಕುದಿಯುವ ಲಾವಾ ಸಮುದ್ರದಲ್ಲಿ ಹೂತುಹೋಗಿತ್ತು, ಇದರಿಂದಾಗಿ 2,000- 15,000 ಜನರು ಸಾವನ್ನಪ್ಪಿದರು. ನಂತರ ಅಲ್ಲಿ ಜನಸಂಪರ್ಕ ಕಡಿತವಾಗಿತ್ತು ಎನ್ನಲಾಗಿದೆ.
ಈಗ ತಂಡವು ಜ್ವಾಲಾಮುಖಿ ಬೂದಿಯಲ್ಲಿ ಹುಡುಕಾಟ ನಡೆಸಿ ಬಾತುಕೋಳಿ ಮೂಳೆ ತುಣುಕುಗಳು, ಹಂದಿ, ಮೇಕೆ, ಮೀನು ಮತ್ತು ಬಸವನ ಹುಳುಗಳ ಅವಶೇಷಗಳನ್ನು ಮಣ್ಣಿನ ಪಾತ್ರೆಗಳಲ್ಲಿ ಪತ್ತೆ ಮಾಡಿದೆ ಎಂದು ವರದಿ ತಿಳಿಸಿದೆ.