ಲಂಡನ್: ಜಗತ್ತಿನ ವಿಶ್ವದ ಆರು ಅತಿ ಶ್ರೀಮಂತ ವ್ಯಕ್ತಿಗಳ ಪೈಕಿ ಸ್ಥಾನ ಪಡೆದಿದ್ದ ಅನಿಲ್ ಅಂಬಾನಿಯ ಸದ್ಯದ ಒಟ್ಟಾರೆ ಆಸ್ತಿ ‘ಶೂನ್ಯ’ವಂತೆ!
ಹೀಗೆಂದು ಅವರು ಬ್ರಿಟನ್ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ. 5 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮೂರು ಚೀನಿ ಬ್ಯಾಂಕ್ ಗಳು ಅನಿಲ್ ಅಂಬಾನಿ ಮಾಲಿಕತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿವೆ. ಈ ಸಂಸ್ಥೆ ದಿವಾಳಿತನದ ಪ್ರಕ್ರಿಯೆಗೆ ಒಳಪಟ್ಟಿದೆ.
ತಮ್ಮ ಬಳಿ ಇರುವ ಐಷಾರಾಮಿ ಕಾರುಗಳು, ಹೆಲಿಕಾಪ್ಟರ್ ಮತ್ತು ಜೆಟ್ ಗಳು ಕಂಪನಿಯ ಹೆಸರಿನಲ್ಲಿದೆ. ತಮ್ಮ ವೈಯಕ್ತಿಕ ಖಾತೆಯಲ್ಲಿ ಶೂನ್ಯ ಮೊತ್ತವಿದೆ ಎಂದು ಅನಿಲ್ ಮಾಹಿತಿ ನೀಡಿದ್ದಾರೆ.