newsics.com
ಮುಂಬೈ: ಗೋವಾದಲ್ಲಿ ನಡೆದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ತೀರ್ಪುಗಾರರ ಮುಖ್ಯಸ್ಥರಾಗಿದ್ದ ಇಸ್ರೇಲ್ನ ಖ್ಯಾತ ನಿರ್ದೇಶಕ ನದಾವ್ ಲಾಪಿಡ್ ದಿ ಕಾಶ್ಮಿರ್ ಫೈಲ್ಸ್ ಅನ್ನು ‘ ತಪ್ಪು ಪ್ರಚಾರದ’ ಮತ್ತು ‘ಅಶ್ಲೀಲ ಚಲನಚಿತ್ರ’ ಎಂದು ಟೀಕೆ ಮಾಡಿದ ತನ್ನ ದೇಶದ ಚಲನಚಿತ್ರ ನಿರ್ಮಾಪಕನನ್ನು ಭಾರತದ ಇಸ್ರೇಲ್ ರಾಯಭಾರಿ ಕಟು ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ.
‘ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಿ ತುಂಬಾ ಡಿಸ್ಟರ್ಬ್ ಆಗಿದ್ದೀವಿ. ಇದೊಂದು ಅಶ್ಲೀಲ ಪ್ರಚಾರದ ಸಿನಿಮಾ. ಇಂಥ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಈ ಸಿನಿಮಾ ಸೂಕ್ತವಲ್ಲ ಎಂದು ಭಾಸವಾಯಿತು’ ಎಂದು ಹೇಳುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಈ ಬಗ್ಗೆ ಇಂದು ಇಸ್ರೇಲ್ ನ ರಾಯಭಾರಿ ನೌ ಗಿಲೋನ್ ಅವರು ಟೈಟರ್ನಲ್ಲಿ ‘ಸಾರ್ವಜನಿಕ ಪತ್ರ’ ಬರೆದಿದ್ದು, ಈ ಮೂಲಕ ಭಾರತೀಯರ ಕ್ಷಮೆ ಯಾಚಿಸಿದ್ದಾರೆ.
ನಮ್ಮ ಭಾರತೀಯ ಸಹೋದರ- ಸಹೋದರಿಯರು ಅರ್ಥಮಾಡಿಕೊಳ್ಳಬೇಕೆಂದು ಸಾರ್ವತ್ರಿಕ ಭಾಷೆಯಲ್ಲಿ ಬರೆಯುತ್ತಿದ್ದೇನೆ. ಚಲನ ಚಿತ್ರಗಳ ನ್ಯಾಯಾಧೀಶರ ಸಮಿತಿಗೆ ನಿಮ್ಮನ್ನು ಅಧ್ಯಕ್ಷರನ್ನಾಗಿ ಭಾರತೀಯರು ನೀಡಿದ್ದ ಅವಕಾಶವನ್ನು ಕೆಟ್ಟ ರೀತಿಯಲ್ಲಿ ದುರುಪಯೋಗ ಪಡಿಸಿಕೊಂಡಿಕೊಂಡಿದ್ದಕ್ಕೆ ಲ್ಯಾಪಿಡ್ ಅವರೇ ನೀವು ನಾಚಿಕೆಪಡಬೇಕು’ ಎಂದು ಗಿಲೋನ್ ವಾಗ್ದಾಳಿ ನಡೆಸಿದ್ದಾರೆ.
ಬೇಟಿ ಬಚಾವೋ ಕಾರ್ಯಕ್ರಮ ವೇದಿಕೆ ಮೇಲೆ ವ್ಯಕ್ತಿಯೊಬ್ಬರಿಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ