Wednesday, July 6, 2022

ಆಪಲ್ ಈಗ ವಿಶ್ವದಲ್ಲೇ ಅತಿ ಮೌಲ್ಯಯುತ ಕಂಪನಿ

Follow Us

ಕ್ಯಾಲಿಫೋರ್ನಿಯಾ: ಆಪಲ್ ಕಂಪನಿ ಈಗ ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಕಂಪನಿ ಎನಿಸಿಕೊಂಡಿದೆ. ಇಲ್ಲಿಯವರೆಗೆ ಆ ಸ್ಥಾನ ಅಲಂಕರಿಸಿದ್ದ ಸೌದಿ ಅರಾಮ್ಕೋ ಕಂಪನಿ ಪಕ್ಕಕ್ಕೆ ಸರಿದಿದೆ. ನಿರೀಕ್ಷೆಗೂ ಮೀರಿ ಆದಾಯ ಗಳಿಸಿದ ಆಪಲ್ ಕಂಪನಿಯ ಷೇರು ಮೌಲ್ಯ ಹೆಚ್ಚಿದೆ.
ಅರಾಮ್ಕೋ ಷೇರಿನ ಬೆಲೆ ಡಿಸೆಂಬರ್ ಕೊನೆಗೆ 6.4% ಕಡಿಮೆ ಆಗಿತ್ತು. ಆದರೆ ಇತರ ಪ್ರಮುಖ ತೈಲ ಕಂಪೆನಿಗಳಾದ ಎಕ್ಸಾನ್ ಮೊಬಿಲ್ (40%) ಮತ್ತು ರಾಯಲ್ ಡಚ್ ಶೆಲ್ (50%) ಷೇರುಗಳು ಅತಿ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾದವು. ಆದರೆ ಈ ವರ್ಷ ಈವರೆಗೆ ಆಪಲ್ ಕಂಪನಿ ಷೇರುಗಳು 45% ಏರಿಕೆ ಆಗಿದೆ.

ಬ್ರೆಜಿಲ್ ಅಧ್ಯಕ್ಷ ಜೈರ್ 12 ಬೆಂಬಲಿಗರ ಫೇಸ್‌ಬುಕ್ ಖಾತೆ ರದ್ದು

ಇದಕ್ಕೂ ಮುನ್ನ ಆಪಲ್ ಕಂಪನಿ ಮೈಕ್ರೋಸಾಫ್ಟ್ ಕಾರ್ಪೊರೇಷನ್’ನ್ನೂ ಮೀರಿ, ಯು.ಎಸ್.ನ ಅತಿ ದೊಡ್ಡ ಸಾರ್ವಜನಿಕ ಕಂಪೆನಿ ಎನಿಸಿಕೊಂಡಿತು. ಕೊರೊನಾ ಬಿಕ್ಕಟ್ಟು ಇರುವ ಸಂದರ್ಭದಲ್ಲಿ ಸೌದಿಯ ಕಂಪನಿ ಅರಾಮ್ಕೋ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಸೌದಿಯ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಆರಂಭದಲ್ಲಿ ಕಂಪನಿಯ 2 ಲಕ್ಷ ಅಮೆರಿಕನ್ ಡಾಲರ್ ಎಂದು ಮೌಲ್ಯಮಾಪನ ಮಾಡಿಕೊಂಡಿದ್ದರು. ಸಾರ್ವಜನಿಕ ಷೇರು ವಿತರಣೆ ಮೂಲಕ 100 ಬಿಲಿಯನ್ USD ಸಂಗ್ರಹಿಸಲು ಮುಂದಾಗಿದ್ದರು. ಆದರೆ, ವಿದೇಶಿ ಹೂಡಿಕೆದಾರರು ಹಿಂಜರಿದ ಹಿನ್ನೆಲೆಯಲ್ಲಿ ಸರ್ಕಾರವು ಸಣ್ಣ ಪ್ರಮಾಣದಲ್ಲಿ ದೇಶೀಯ ವಿತರಣೆ ಮಾಡಿತು ಹಾಗೂ 30 ಬಿಲಿಯನ್ ಡಾಲರ್ ಅಮೆರಿಕನ್ ಡಾಲರ್ ಸಂಗ್ರಹಿಸುವ ಮೂಲಕ ಅತಿ ದೊಡ್ಡ ಐಪಿಒ ಎಂಬ ದಾಖಲೆ ಬರೆಯಿತು. ಈ ವರ್ಷ ಕಚ್ಚಾ ತೈಲ ಬೆಲೆ ಕುಸಿತ ಕಂಡು, ಅರಾಮ್ಕೋದ ಎರಡನೇ ತ್ರೈಮಾಸಿಕದ ಆದಾಯ 76 ಬಿಲಿಯನ್ ಡಾಲರ್’ನಿಂದ 37 ಬಿಲಿಯಬ್ ಡಾಲರ್’ಗೆ ಇಳಿಕೆಯಾಯಿತು.

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!