newsics.com
ಯೆರೆವಾನ್ (ಆರ್ಮೇನಿಯ): ಆರ್ಮೇನಿಯ ಮತ್ತು ಅಝರ್‌ಬೈಜಾನ್ ದೇಶಗಳ ನಡುವೆ ಸೋಮವಾರವೂ ಭೀಕರ ಯುದ್ಧ ಮುಂದುವರಿದಿದ್ದು, ಕನಿಷ್ಠ 31 ಸೈನಿಕರು ಮೃತಪಟ್ಟಿದ್ದಾರೆ.
ಯುದ್ಧದಲ್ಲಿ ಮೇಲುಗೈ ಸಾಧಿಸಿರುವುದಾಗಿ ಎರಡೂ ದೇಶಗಳು ಹೇಳಿಕೊಂಡಿವೆ. ನಗೋರ್ನೊ-ಕರಬಾಖ್ ವಲಯವು ಅಝರ್‌ಬೈಜಾನ್‌ನ ಭಾಗವಾಗಿದೆ. ಆದರೆ ಅದರ ಆಡಳಿತವನ್ನು ಪ್ರತ್ಯೇಕತಾವಾದಿ ಆರ್ಮೇನಿಯನ್ ಜನಾಂಗೀಯರು ನಡೆಸುತ್ತಿದ್ದಾರೆ ಎನ್ನುವುದು ಅಂತಾರಾಷ್ಟ್ರೀಯ ಸಮುದಾಯದ ನಿಲುವಾಗಿದೆ.
ತನ್ನ 31 ಸೈನಿಕರು ಮೃತಪಟ್ಟಿದ್ದಾರೆ. ಕಳೆದುಕೊಂಡಿದ್ದ ಕೆಲವು ಸ್ಥಳಗಳನ್ನು ಮರುಪಡೆಯಲಾಗಿದೆ ಎಂದು ನಗೋರ್ನೊ-ಕರಬಾಖ್‌ನ ಪ್ರತ್ಯೇಕತಾವಾದಿ ಆಡಳಿತ ಹೇಳಿದೆ. ಆರ್ಮೇನಿಯ ನಡೆಸಿರುವ ಭಾರೀ ಶೆಲ್ ದಾಳಿಗಳಿಂದಾಗಿ ತನ್ನ 26 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಝರ್ ಬೈಜಾನ್ ಹೇಳಿದೆ.
ಆರ್ಮೇನಿಯ ಮತ್ತು ಅಝರ್ ಬೈಜಾನ್‌ಗಳೆರಡೂ ಈಗಾಗಲೇ ಕೆಲವು ಪ್ರದೇಶಗಳಲ್ಲಿ ಸೇನಾಡಳಿತವನ್ನು ಘೋಷಿಸಿವೆ ಹಾಗೂ ಸೈನಿಕರ ಜಮಾವಣೆಗೆ ಆದೇಶ ನೀಡಿವೆ. 2016ರ ನಂತರ ಈ ಪ್ರಮಾಣದ ಯುದ್ಧ ನಡೆಯುತ್ತಿರುವುದು ಇದೇ ಮೊದಲು.
ವಿಶ್ವಸಂಸ್ಥೆ ಕಳವಳ
ಆರ್ಮೇನಿಯ ಮತ್ತು ಅಝರ್ ಬೈಜಾನ್ ದೇಶಗಳ ನಡುವೆ ಹೊಸದಾಗಿ ಯುದ್ಧ ಸ್ಫೋಟಿಸಿರುವುದು ಭಾರೀ ಕಳವಳಕ್ಕೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ. ‘ಯುದ್ಧವನ್ನು ತಕ್ಷಣ ನಿಲ್ಲಿಸಿ, ಉದ್ವಿಗ್ನತೆಯನ್ನು ಶಮನಗೊಳಿಸಿ ಅರ್ಥಪೂರ್ಣ ಮಾತುಕತೆಗೆ ಮರಳುವಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಉಭಯ ಪಕ್ಷಗಳಿಗೆ ಕರೆ ನೀಡಿದ್ದಾರೆಂದು ಗುಟೆರಸ್ ವಕ್ತಾರರು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ; ಪಾಕ್ ಪ್ರತಿಪಕ್ಷ ನಾಯಕನ ಬಂಧನ
ಅಸ್ಸಾಂ ಮಾಜಿ ಸಿಎಂ ಸೈಯದಾ ನಿಧನ