newsics.com
ಬ್ಯಾಂಕಾಕ್: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ ನಡೆದಿದೆ.
ಮ್ಯಾನ್ಮಾರ್ನ ಸ್ಥಳೀಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ಬುಧವಾರ ಸಂಜೆ ಸೈನಿಕರು ಶಂಕಿತರ ಗುಂಪನ್ನು ಪತ್ತೆಹಚ್ಚಿದ್ದರು. ಸೈನಿಕರ ಸೂಚನೆ ಧಿಕ್ಕರಿಸಿ ಗುರುವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆಸಿದರು. ಈ ವೇಳೆ 15 ಶಂಕಿತರನ್ನು ಸಾವಿಗೀಡಾಗಿದ್ದಾರೆ ಎಂದು ಥಾಯ್ಲೆಂಡ್ನ ಮಿಲಿಟರಿ ಘಟಕ ಫಾ ಮುವಾಂಗ್ ಟಾಸ್ಕ್ಫೋರ್ಸ್ ಗುರುವಾರ ತಿಳಿಸಿದೆ. ಕಾರ್ಯಾಚರಣೆ ಸ್ಥಳದಲ್ಲಿ 29 ಬ್ಯಾಗ್ ಮಾದಕವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.