ಮನಿಲಾ: ಏಷ್ಯನ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತ ಕಜಕಸ್ತಾನದ ವಿರುದ್ಧ 4-1 ಮುನ್ನಡೆ ಸಾಧಿಸಿದ್ದು ಫ್ರೀ ಕ್ವಾರ್ಟರ್ ಪೈನಲ್ ಹಣಾಹಣಿಯಲ್ಲಿ ಸನಿಹ ತಲುಪಿದೆ.
ಮನಿಲಾದಲ್ಲಿ ಕಿಡಂಬಿ ಶ್ರೀಕಾಂತ್ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡ ಈ ಸಾಧನೆ ಮಾಡಿದೆ.
ವಿಶ್ವದ ಮಾಜಿ ಅಗ್ರ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ ಜತೆಗೆ, ಲಕ್ಷ್ಯ ಸೇನ್ ಹಾಗೂ ಶುಭಾಂಕರ್ ಡೇ ಅವರು ಪ್ರತ್ಯೇಕ ಸಿಂಗಲ್‌ಸ್ ಹಣಾಹಣಿಗಳಲ್ಲಿ ಸುಲಭವಾಗಿ ಜಯ ಸಾಧಿಸಿದ್ದಾರೆ.
ಕೇವಲ 23 ನಿಮಿಷಗಳಲ್ಲಿ ಶ್ರೀಕಾಂತ್ ಡಿಮಿಟ್ರಿ ಪನಾರಿನ್ ಅವರ ವಿರುದ್ಧ ಜಯ ಸಾಧಿಸಿದರೆ, ಲಕ್ಷ್ಯ ಸೇನ್ ಅವರು ಅರ್ತುರ್ ನಿಯಾರೆವ್ ವಿರುದ್ಧ 21 ನಿಮಿಷಗಳ ಪಂದ್ಯದಲ್ಲಿ ಸುಲಭವಾಗಿ ಜಯ ದಾಖಲಿಸಿದರು. ಮೂರನೇ ಸಿಂಗಲ್ಸ್‌ನಲ್ಲಿ ಡೇ 26 ನಿಮಿಷಗಳಲ್ಲಿ ಖೈಟ್‌ಮುರತ್ ಕುಲ್ಮಾಟೋವ್ ಅವರನ್ನು ಮಣಿಸಿದರು.